News Kannada
Wednesday, March 29 2023

ವಿದೇಶ

ಉಕ್ರೇನ್​-ರಷ್ಯಾ  ಯುದ್ಧ ಪರಿಸ್ಥಿತಿ ತನಿಖೆ ಶೀಘ್ರವೇ ಪ್ರಾರಂಭಿಸುತ್ತೇವೆ ಎಂದ ಅಂತಾರಾಷ್ಟ್ರೀಯ ನ್ಯಾಯಾಲಯ

Kalaburagi: Promoting IS I S, native man gets 7-year jail in Jaipur
Photo Credit :

ಉಕ್ರೇನ್​ ಮೇಲೆ ರಷ್ಯಾ ಆಕ್ರಮಣ ಮಾಡಿ ವಾರ ಕಳೆದಿದೆ. ಹೀಗಿರುವಾಗ ರಷ್ಯಾದ ದಾಳಿಯಿಂದ ಉಕ್ರೇನ್​​ನಲ್ಲಿ ಉಂಟಾದ ಯುದ್ಧ ಅಪರಾಧ ಪರಿಸ್ಥಿತಿ ಸಂಬಂಧ ತನಿಖೆ ಶುರು ಮಾಡುವುದಾಗಿ ಅಂತಾರಾಷ್ಟ್ರೀಯ ಕ್ರಿಮಿನಲ್​ ಕೋರ್ಟ್​ ತಿಳಿಸಿದೆ.

ರಷ್ಯಾ ಆಕ್ರಮಣದಿಂದ ಉಕ್ರೇನ್​​ನಲ್ಲಿ ಎದುರಾಗಿರುವ ಪರಿಸ್ಥಿತಿಯ ತನಿಖೆಯನ್ನು ಆದಷ್ಟು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಅಂತಾರಾಷ್ಟ್ರೀಯ ಕ್ರಿಮಿನಲ್​ ಕೋರ್ಟ್​​ನ ಪ್ರಾಸಿಕ್ಯೂಟರ್​ ಕರೀಮ್​ ಖಾನ್​ ಸೋಮವಾರ ಘೋಷಿಸಿದ್ದಾರೆ.

2014ರಿಂದಲೂ ಉಕ್ರೇನ್​​ನಲ್ಲಿ ಯುದ್ಧ ಅಪರಾಧಗಳು ಮತ್ತು ಮಾನವೀಯತೆ ವಿರುದ್ಧ ದೌರ್ಜನ್ಯ, ಅಪರಾಧಗಳು ನಡೆಯುತ್ತ ಬಂದಿವೆ ಎಂಬುದಕ್ಕೆ ಸಮಂಜಸವಾದ ಸಾಕ್ಷಿಗಳು ಇವೆ. ಹೀಗಾಗಿ ಕೂಡಲೇ ತನಿಖೆ ಕೈಗೆತ್ತಿಕೊಳ್ಳುತ್ತೇವೆ ಎಂದು ಕರೀಮ್​ ಖಾನ್​ ತಿಳಿಸಿದ್ದಾರೆ.

ಯುದ್ಧ ಅಪರಾಧಗಳು ಎಂದರೆ ಯಾವುದೇ ಎರಡು ದೇಶಗಳ ಮಧ್ಯೆ ಯುದ್ಧ ನಡೆಯುವಾಗ ಅದಕ್ಕೂ ಕೆಲವು ಕಾನೂನುಗಳು ಇರುತ್ತವೆ. ಅದನ್ನು ಉಲ್ಲಂಘಿಸುವುದೇ ಯುದ್ಧ ಅಪರಾಧ ಎನ್ನಿಸಿಕೊಳ್ಳುತ್ತದೆ. ಈ ಬಾರಿ ರಷ್ಯಾ ಪ್ರಾರಂಭದಲ್ಲಿ ತಾನು ಉಕ್ರೇನ್​​ ನಾಗರಿಕರ ಮೇಲೆ ಹಲ್ಲೆ ನಡೆಸುವುದಿಲ್ಲ, ಹತ್ಯೆ ಮಾಡುವುದಿಲ್ಲ.

ಉಕ್ರೇನ್​ ಸೇನೆಯನ್ನು ಹಿಮ್ಮೆಟ್ಟಿಸುವುದಷ್ಟೇ ನಮ್ಮ ಆದ್ಯತೆ ಎಂದು ಹೇಳಿತ್ತು. ಆದರೆ ಈಗ ರಷ್ಯಾ ಮನಸಿಗೆ ಬಂದಲ್ಲಿ ದಾಳಿ ನಡೆಸುತ್ತಿದೆ, ಶಾಲೆಗಳು, ಶಿಶುವಿಹಾರ, ಆಂಬುಲೆನ್ಸ್​ಗಳನ್ನೂ ಬಿಡುತ್ತಿಲ್ಲ ಎಂದು ಉಕ್ರೇನ್​ ಆರೋಪಿಸಿದೆ.

 

See also  ರಷ್ಯಾ ದಾಳಿಗೆ ಉಕ್ರೇನ್ ಪ್ರತೀಕಾರ, 3,500 ಕ್ಕೂ ಹೆಚ್ಚು ರಷ್ಯನ್ ಸೈನಿಕರ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು