News Kannada
Friday, September 30 2022

ವಿದೇಶ

ಬಾಂಗ್ಲಾದೇಶ:ಇಸ್ಕಾನ್​ ರಾಧಾಕಾಂತ ದೇವಸ್ಥಾನದ ಮೇಲೆ 200ಕ್ಕೂ ಹೆಚ್ಚು ಮಂದಿಯಿಂದ ದಾಳಿ - 1 min read

Photo Credit :

ಢಾಕಾ:  ಬಾಂಗ್ಲಾದೇಶದ ರಾಜಧಾನಿ ಢಾಕಾದ ವಾರಿಯಲ್ಲಿರುವ 222 ಲಾಲ್​ ಮೋಹನ್​ ಸಹಾ ಸ್ಟ್ರೀಟ್​ನಲ್ಲಿರುವ ಇಸ್ಕಾನ್​ ರಾಧಾಕಾಂತ ದೇವಸ್ಥಾನದ ಮೇಲೆ ಸುಮಾರು 200 ಮಂದಿ ದಾಳಿ ಮಾಡಿ, ಹಾಜಿ ಸಫಿಉಲ್ಲಾ ನೇತೃತ್ವದ ಗುಂಪೊಂದು ಈ ಕೃತ್ಯವನ್ನು ಎಸಗಿದ್ದಾರೆಂದು ತಿಳಿದುಬಂದಿದೆ.

ಗುರುವಾರ ಈ ಘಟನೆ ನಡೆದಿದೆ. ಹಾನಿಗೊಳಿಸಿರುವುದಲ್ಲದೆ, ದೇವಸ್ಥಾನವನ್ನು ಲೂಟಿ ಮಾಡಿರುವುದು ವರದಿಯಾಗಿದೆ. ದಾಳಿಯಲ್ಲಿ ಸುಮಂತ್ರ ಚಂದ್ರ, ಶ್ರವಣ್​, ನಿಹಾರ್​ ಹಲ್ದಾರ್​, ರಾಜೀವ್​ ಭದ್ರ ಸೇರಿದಂತೆ ಅನೇಕ ಜನರು ಗಾಯಗೊಂಡಿದ್ದಾರೆ.

ಕಳೆದ ವರ್ಷ ಬಾಂಗ್ಲಾದೇಶದ ಕೊಮಿಲ್ಲಾ ಪಟ್ಟಣದ ನನುವಾರ್ ದಿಘಿ ಸರೋವರದ ಬಳಿಯ ದುರ್ಗಾ ಪೂಜೆ ವೇಳೆ ಕುರಾನ್ ಅನ್ನು ಅಪವಿತ್ರಗೊಳಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿ ಹರಡಿದ ಬೆನ್ನಲ್ಲೇ ಉಂಟಾದ ಹಿಂಸಾಚಾರದಲ್ಲಿ ಕನಿಷ್ಠ ಮೂವರನ್ನು ಕೊಲ್ಲಲಾಗಿತ್ತು.

ಈ ಹಿಂದೆ, ಢಾಕಾದ ಟಿಪ್ಪು ಸುಲ್ತಾನ್ ರಸ್ತೆ ಮತ್ತು ಚಿತ್ತಗಾಂಗ್‌ನ ಕೊಟ್ವಾಲಿಯಲ್ಲಿಯೂ ಇದೇ ರೀತಿಯ ಘಟನೆಗಳು ವರದಿಯಾಗಿದ್ದವು.

See also  ಲಂಕಾ ಅಧ್ಯಕ್ಷರ ವಿರುದ್ಧ ದಂಗೆ ಎದ್ದ ಜನರು, 45 ಮಂದಿ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12795
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು