News Kannada
Tuesday, December 06 2022

ವಿದೇಶ

ಚೆರ್ನೋಬಿಲ್ ಪ್ರಯೋಗಾಲಯವನ್ನು ನಾಶಪಡಿಸಿದ ರಷ್ಯಾ ಪಡೆ

Photo Credit :

ಕೀವ್: ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರದಲ್ಲಿನ ವಿಕಿರಣಶೀಲ ತ್ಯಾಜ್ಯದ ನಿರ್ವಹಣೆಯನ್ನು ಸುಧಾರಿಸಲು ಕೆಲಸ ಮಾಡುತ್ತಿದ್ದ ಹೊಸ ಪ್ರಯೋಗಾಲಯವನ್ನು ರಷ್ಯಾದ ಪಡೆಗಳು ನಾಶಪಡಿಸಿವೆ ಎಂದು ಚೆರ್ನೋಬಿಲ್ ಹೊರ ವಲಯದ ಅಧಿಕಾರಿ ಮಂಗಳವಾರ ತಿಳಿಸಿದ್ದಾರೆ.

ಯುರೋಪಿಯನ್ ಕಮಿಷನ್ ಬೆಂಬಲದೊಂದಿಗೆ 6 ಮಿಲಿಯನ್ ಯುರೋ ವೆಚ್ಚದಲ್ಲಿ ನಿರ್ಮಿಸಲಾದ ಈ ಪ್ರಯೋಗಾಲಯವನ್ನು 2015 ರಲ್ಲಿ ತೆರೆಯಲಾಗಿತ್ತು ಎಂದು ಉಕ್ರೇನ್ ಹೇಳಿದೆ.

ಈ ಪ್ರಯೋಗಾಲಯವು ‘ಹೆಚ್ಚು ಸಕ್ರಿಯವಾಗಿರುವ ಸ್ಯಾಂಪಲ್‌ಗಳು ಮತ್ತು ರೇಡಿಯೊನ್ಯೂಕ್ಲೈಡ್‌ಗಳ ಮಾದರಿಗಳನ್ನು ಹೊಂದಿದೆ. ಇದು ಈಗ ಶತ್ರುಗಳ ಕೈಯಲ್ಲಿದೆ, ಅದು ತನಗೆ ತಾನೇ ಹಾನಿ ಮಾಡಿಕೊಳ್ಳುತ್ತದೆ ಮತ್ತು ನಾಗರಿಕ ಜಗತ್ತಿಗೆ ಅಲ್ಲ ಎಂದು ನಾವು ಭಾವಿಸುತ್ತೇವೆ’ ಎಂದು ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಯುದ್ಧದ ಆರಂಭದಲ್ಲಿ ರಷ್ಯಾದ ಸೇನೆಯು ಸ್ಥಗಿತಗೊಂಡಿದ್ದ ಸ್ಥಾವರವನ್ನು ವಶಪಡಿಸಿಕೊಂಡಿತು. ಬಹಿಷ್ಕರಣ ವಲಯವು ಸ್ಥಾವರದ ಸುತ್ತಲಿನ ಕಲುಷಿತ ಪ್ರದೇಶವಾಗಿದ್ದು, 1986 ರಲ್ಲಿ ಚೆರ್ನೊಬಿಲ್‌ ದುರಂತ ಸಂಭವಿಸಿತ್ತು.

ರೇಡಿಯೋನ್ಯೂಕ್ಲೈಡ್‌ ಎನ್ನುವುದು ವಿಕಿರಣವನ್ನು ಸೂಸುವ ರಾಸಾಯನಿಕ ಅಂಶಗಳ ಅಸ್ಥಿರ ಅಣುಗಳಾಗಿವೆ.

ಮತ್ತೊಂದು ಆತಂಕಕಾರಿ ಬೆಳವಣಿಗೆಯಲ್ಲಿ, ಸ್ಥಾವರದ ಸುತ್ತಲಿನ ವಿಕಿರಣ ಪರಿವೀಕ್ಷಣಾ ಸಾಧನಗಳು ಕಾರ್ಯಾಚರಣೆ ನಿಲ್ಲಿಸಿವೆ ಎಂದು ಉಕ್ರೇನ್‌ನ ಪರಮಾಣು ನಿಯಂತ್ರಣ ಸಂಸ್ಥೆ ಸೋಮವಾರ ಹೇಳಿದೆ.

See also  ಪಾಕ್ ಪ್ರಧಾನಿ ಇಮ್ರಾನ್‌ ಖಾನ್‌ ರಾಜೀನಾಮೆಗೆ ಪಟ್ಟುಹಿಡಿದ ಸ್ವಪಕ್ಷಿಯರು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12795
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು