News Kannada
Friday, October 07 2022

ವಿದೇಶ

ಯಾರಾದರೂ ನಮಗೆ ಬೆಂಬಲ ನೀಡಿ, ಆದರೆ ಮೌನವಾಗಿರಬೇಡಿ; ಝೆಲೆನ್‌ಸ್ಕಿ - 1 min read

Photo Credit :

ಕೀವ್ : ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ಗ್ರ್ಯಾಮಿ ಪ್ರಶಸ್ತಿ ಕಾರ್ಯಕ್ರಮದಲ್ಲಿ ವಿಡಿಯೊ ಸಂದೇಶದಲ್ಲಿ ಕಾಣಿಸಿಕೊಂಡರು. ಈ ವೇಳೆ ಉಕ್ರೇನ್ ಮೇಲೆ ರಷ್ಯಾ ಆಕ್ರಮಣದ ಕುರಿತು ಕಥೆಯನ್ನು ಹೇಳಲು ಬೆಂಬಲ ಸೂಚಿಸುವಂತೆ ಮನವಿ ಮಾಡಿದರು.

ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಪ್ರಸಾರವಾದ ಸಂದೇಶದಲ್ಲಿ, ಆಕ್ರಮಣದ ವಿರುದ್ಧದ ಮೌನ ಮಾರಣಾಂತಿಕ ಎಂದ ಅವರು, ಈ ಮೌನವು ಮಕ್ಕಳು ಸೇರಿದಂತೆ ಉಕ್ರೇನ್ ಜನರ ಕನಸುಗಳು ಮತ್ತು ಜೀವನವನ್ನು ನಂದಿಸುವ ಬೆದರಿಕೆಯಾಗಿದೆ ಎಂದರು.

‘ನಮ್ಮ ಸಂಗೀತಗಾರರು ಸೂಟ್ ಬದಲಿಗೆ ದೇಹದ ರಕ್ಷಾಕವಚವನ್ನು ಧರಿಸುತ್ತಿದ್ದಾರೆ. ಅವರು ಆಸ್ಪತ್ರೆಗಳಲ್ಲಿ ಗಾಯಾಳುಗಳಿಗಾಗಿ ಹಾಡುತ್ತಿದ್ದಾರೆ. ಕೇಳಿಸದವರಿಗೂ ಹಾಡನ್ನು ಹಾಡುತ್ತಿದ್ದಾರೆ. ಆದರೆ, ಸಂಗೀತವು ಹೇಗಾದರೂ ಅವರನ್ನು ಮುಟ್ಟುತ್ತದೆ’ ಎಂದು ಹೇಳಿದರು.

ಸಮಾರಂಭದ ಆರಂಭಕ್ಕೂ ಮುನ್ನ, ಮಾನವೀಯ ಬಿಕ್ಕಟ್ಟು ತಲೆದೋರಿರುವ ಉಕ್ಳೇನ್‌ಗೆ ನೆರವು ನೀಡಲು ಹಣ ಸಂಗ್ರಹಿಸಲು ‘ಸ್ಟ್ಯಾಂಡ್ ಅಪ್ ಫಾರ್ ಉಕ್ರೇನ್’ ಎಂಬ ಸಾಮಾಜಿಕ ಮಾಧ್ಯಮ ಅಭಿಯಾನಕ್ಕೆ ರೆಕಾರ್ಡಿಂಗ್ ಅಕಾಡೆಮಿ ಮತ್ತು ಅದರ ಪಾಲುದಾರ ಗ್ಲೋಬಲ್ ಸಿಟಿಜನ್ ಚಾಲನೆ ನೀಡಿತು.

‘ಈ ಮೌನವನ್ನು ನಿಮ್ಮ ಸಂಗೀತದಿಂದ ತುಂಬಿ. ನಮ್ಮ ಕಥೆಯನ್ನು ಹೇಳಲು ಇಂದೇ ನಿಮ್ಮ ಸಂಗೀತವನ್ನು ಬಳಸಿ. ನಿಮ್ಮ ಸಾಮಾಜಿಕ ಜಾಲತಾಣಗಳಲ್ಲಿ, ಟಿವಿಯಲ್ಲಿ ಯುದ್ಧದ ಬಗ್ಗೆ ಸತ್ಯವನ್ನು ಹೇಳಿ, ನೀವು ಯಾವುದೇ ರೀತಿಯಲ್ಲಿ ನಮ್ಮನ್ನು ಬೆಂಬಲಿಸಿ, ಆದರೆ ಮೌನವಾಗಿರಬೇಡಿ. ಆಗಷ್ಟೇ ನಮ್ಮ ಎಲ್ಲಾ ನಗರಗಳಲ್ಲಿ ಶಾಂತಿ ನೆಲೆಸುತ್ತದೆ’ ಎಂದು ಝೆಲೆನ್‌ಸ್ಕಿ ಹೇಳಿದರು.

ಝೆಲೆನ್‌ಸ್ಕಿ ಅವರ ಮನವಿಯ ಮೇರೆಗೆ, ಜಾನ್ ಲೆಜೆಂಡ್ ತನ್ನ ‘ಫ್ರೀ’ ಹಾಡನ್ನು ಉಕ್ರೇನ್ ಸಂಗೀತಗಾರರಾದ ಸಿಯುಝನ್ನಾ ಇಗ್ಲಿಡಾನ್, ಮಿಕಾ ನ್ಯೂಟನ್ ಮತ್ತು ಕವಿ ಲ್ಯುಬಾ ಯಾಕಿಮ್ಚುಕ್ ಅವರೊಂದಿಗೆ ಹಾಡಿದರು. ಈ ವೇಳೆ ಯುದ್ಧದಿಂದ ಉಕ್ರೇನ್‌ನಲ್ಲಿ ಉಂಟಾಗಿರುವ ಪರಿಣಾಮಗಳ ಚಿತ್ರಗಳನ್ನು ಅವರ ಹಿಂದೆ ಪರದೆಯ ಮೇಲೆ ಪ್ರದರ್ಶಿಸಲಾಯಿತು.

See also  ರಷ್ಯಾದ 11,000 ಕ್ಕೂ ಹೆಚ್ಚು ಸೈನಿಕರ ಹತ್ಯೆ: ವರದಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12790
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು