News Kannada
Saturday, October 01 2022

ವಿದೇಶ

ರೋಗಕಾರಕ ಶಿಲೀಂಧ್ರಗಳಿಂದ ವಿವಿಧ ಸೋಂಕು ಸಾಧ್ಯತೆ - 1 min read

Photo Credit :

ಬೀಜಿಂಗ್‌: ಮುಂದಿನ ಸಾಂಕ್ರಾಮಿಕದ ಮೂಲ ಶಿಲೀಂಧ್ರಗಳಾಗಿರುತ್ತವೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

2021ರ ಮಧ್ಯಭಾಗದಲ್ಲಿ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾದವರಲ್ಲಿ “ಮ್ಯುಕೋರ್ಮಿಕಾಸಿಸ್‌’ ಎಂಬ ಫಂಗಲ್ ಇನ್‌ಫೆಕ್ಷನ್‌ ಕಂಡುಬಂದಿದ್ದು ನೆನಪಿರಬಹುದು.

ಇಂಥದ್ದೇ ರೋಗಕಾರಕ ಶಿಲೀಂಧ್ರಗಳು ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಸಾಂಕ್ರಾಮಿಕ ಮೂಲಗಳಾಗಬಹುದು ಎಂದು ಅಂದಾಜಿಸಲಾಗಿದೆ.

ಅಮೆರಿಕದಲ್ಲಿ ವ್ಯಾಲಿ ಫಿವರ್‌, ಕಾಕ್ಸಿಡಿಯೋಮೈಕೋಸಿಸ್‌ ಮುಂತಾದ ರೋಗಗಳಿಗೆ ಕಾರಣವಾಗುವ ಶಿಲೀಂಧ್ರ ರೋಗಕಾರಕವು ಮಣ್ಣಿನಲ್ಲೇ ಇರುವ ಕಾರಣ ಮಾನವನಿಗೆ ಅಪಾಯಕಾರಿ ಎಂದು ಪರಿಗಣಿಸಲ್ಪಟ್ಟಿದೆ. ಹವಾಮಾನ ವೈಪರೀತ್ಯವು ಇಂಥ ಶಿಲೀಂಧ್ರಗಳ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡುತ್ತಿವೆ.

ಸಾಮೂಹಿಕ ಪರೀಕ್ಷೆಗೆ ಸಿದ್ಧತೆ:
ಚೀನದ ಅತಿದೊಡ್ಡ ನಗರ ಶಾಂಘೈನಲ್ಲಿ ಸತತ 5ನೇ ದಿನವೂ 17,007 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, ನಗರದಾದ್ಯಂತ ಮತ್ತೊಂದು ಸುತ್ತಿನ ಸಾಮೂಹಿಕ ಪರೀಕ್ಷೆಗೆ ಸಿದ್ಧತೆ ಆರಂಭವಾಗಿದೆ.

ಮಾ.1ರಿಂದೀಚೆಗೆ ಕೊರೊನಾ ಸೋಂಕಿತರ ಸಂಖ್ಯೆ 94 ಸಾವಿರ ದಾಟಿದ್ದು, 2.60 ಕೋಟಿ ಜನಸಂಖ್ಯೆಯಿರುವ ನಗರದಲ್ಲಿ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಮೊದಲ ಬಾರಿಗೆ ಸೋಂಕು ಪತ್ತೆಯಾದ ವುಹಾನ್‌ ನಗರದಲ್ಲಿ ಒಂದೇ ದಿನದಲ್ಲಿ ಗರಿಷ್ಠವೆಂದರೆ 13,436 ಮಂದಿಗೆ ಸೋಂಕು ತಗುಲಿತ್ತು. ಚೀನಾದ ನಗರದಲ್ಲಿ ದಾಖಲಾದ ಗರಿಷ್ಠ ಸೋಂಕು ಪ್ರಕರಣ ಇದಾಗಿತ್ತು. ಆದರೆ, ಈಗ ಶಾಂಘೈನಲ್ಲಿ ಒಂದೇ ದಿನ 17 ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು ತಗಲುವ ಮೂಲಕ, ವುಹಾನ್‌ನ ದಾಖಲೆಯೂ ಸರಿಗಟ್ಟಿದಂತಾಗಿದೆ. ಲಾಕ್‌ಡೌನ್‌ ಹಿನ್ನೆಲೆ ಸತತ 2 ವಾರಗಳಿಂದ ನಗರದ ಜನ ಮನೆಯೊಳಗೆ ಬಂಧಿಯಾಗಿದ್ದಾರೆ.

See also  ಚೀನಾದ ಪ್ರಭಾವ ಎದುರಿಸಲು ಐರೋಪ್ಯ ಒಕ್ಕೂಟದ 340 ಬಿಲಿಯನ್ ಡಾಲರ್ ಯೋಜನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು