News Kannada
Sunday, September 25 2022

ವಿದೇಶ

ಚಿನ್ನ ಗಣಿಗಾರಿಕೆ ವೇಳೆ ಭೂಕುಸಿತ : 12 ಸಾವು - 1 min read

Photo Credit :

ಇಂಡೋನೇಷ್ಯಾ : ಇಂಡೋನೇಷ್ಯಾದ ಸುಮಾತ್ರಾ ದ್ವೀಪದಲ್ಲಿ ಅನಧಿಕೃತ ಚಿನ್ನದ ಗಣಿಗಾರಿಕೆ ನಡೆಯುತ್ತದ್ದಾಗ ಭೂಕುಸಿತ ಸಂಭವಿಸಿ ವ್ದ 12 ಮಹಿಳೆಯರು ಸಾವನ್ನಪ್ಪಿದ್ದಾರೆ.

ಉತ್ತರ ಸುಮಾತ್ರದ ಮಾಂಡೈಲಿಂಗ್ ನಟಾಲ್ ಜಿಲ್ಲೆಯಯ ಹಳ್ಳಿಯೊಂದರಲ್ಲಿ ಸ್ಥಳೀಯ ಗ್ರಾಮದ ಮಹಿಳೆಯರು ಚಿನ್ನದ ಗಣಿಯ ವಯಯದಲ್ಲಿ ಸುಮಾರು 2 ಮೀಟರ್ (6.5 ಅಡಿ) ಆಳದ ಹೊಂಡ ತೆಗೆದು ನಿನ್ನೆ ಸಂಜೆ ಚಿನ್ನದ ಮೆತ್ತಿರುವ ಕಲ್ಲು ಹೊಡೆದು ಸಂಗ್ರಹಿಸುವ ವೇಳೆ ಭೂಕುಸಿತ ಉಂಟಾಗಿದೆ.

ಎರಡು ಗಂಟೆಗಳ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯು ಗಾಯಗೊಂಡ ಇಬ್ಬರು ಮಹಿಳೆಯರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ ಮತ್ತು 12 ಇತರ ಮಹಿಳೆಯರ ದೇಹಗಳನ್ನು ಅವಶೇಷಗಳಿಂದ ಹೊರತೆಗೆದಿದೆ ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥ ಮರ್ಲಾನ್ ರಾಜಗುಕ್ಗುಕ್ ಹೇಳಿದರು.

ಇಲ್ಲಿನ ಬೆಟ್ಟ ಗುಡ್ಡದಲ್ಲಿ ಚಿನ್ನದ ನಿಕ್ಷೇಪ ವಿದ್ದು ಅದನ್ನು ತೆಗೆಯಲು ಸ್ತಳೀಯರು ಅಪಾಯವನ್ನು ಲೆಕ್ಕಿಸದೆ ಸಾಂಪ್ರದಾಯಕವಾಗಿ ಸಣ್ಣ ಗಣಿಗಾರಿಕೆ ನಡೆಸುತ್ತಾರೆ ಚಿನ್ನದ ಮುಖ್ಯ ಮೂಲವಾಗಿದ್ದ ಈ ಪ್ರದೇಶದಲ್ಲಿ ಅಕಾರಿಗಳು ಅಕ್ರಮ ಚಿನ್ನದ ಹೊಂಡಗಳನ್ನು ಮುಚ್ಚಿದ್ದಾರೆ ಆದರೂ ಇಂಡೋನೇಷ್ಯಾದಲ್ಲಿ ಅನೌಪಚಾರಿಕ ಗಣಿಗಾರಿಕೆ ಕಾರ್ಯಾಚರಣೆಗಳು ಸಾಮಾನ್ಯವಾಗಿದೆ, ಹೆಚ್ಚಿನ ಅಪಾಯವಿರುವ ಪರಿಸ್ಥಿತಿಗಳಲ್ಲಿ ಕೆಲಸ ಮಾಡುವ ಸಾವಿರಾರು ಜನರಿಗೆ ಅಲ್ಪ ಜೀವನೋಪಾಯವನ್ನು ಒದಗಿಸುತ್ತದೆ.

ಹೆಚ್ಚಿನ ಚಿನ್ನದ ಅದಿರು ಸಂಸ್ಕರಣೆಯು ಹೆಚ್ಚು ವಿಷಕಾರಿ ಪಾದರಸ ಮತ್ತು ಸೈನೈಡ್ ಅನ್ನು ಬಳಸುತ್ತಾರೆ ಆದರೆ ಯಾವುದೇ ರಕ್ಷಣಾ ವಿಧಾನ ಬಳಸುವುದಿಲ್ಲ. ಕಳೆದ ಫೆಬ್ರವರಿ 2019 ರಲ್ಲಿ ಉತ್ತರ ಸುಲವೆಸಿ ಪ್ರಾಂತ್ಯದ ಅಕ್ರಮ ಚಿನ್ನದ ಗಣಿಗಾರಿಕೆ ವೇಳೆ ಭೂಕುಸಿತ ಉಂಟಾಂಗಿ 40 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು.

See also  ಚಾಮುಂಡಿ ಬೆಟ್ಟದ ಒಂದು ಭಾಗದಲ್ಲಿ ಭೂಕುಸಿತ, ದುರಸ್ತಿ ಕಾರ್ಯವನ್ನು ಕೈಗೊಳ್ಳಬೇಕೆಂದು ಸಚಿವ ಸಿ.ಸಿ.ಪಾಟೀಲ ಸೂಚನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

1616
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು