News Kannada
Sunday, October 02 2022

ವಿದೇಶ

ಬೀಜಿಂಗ್‌ನಲ್ಲಿ ಸೆಮಿ ಲಾಕ್‌ಡೌನ್‌ ಘೋಷಣೆ - 1 min read

Photo Credit : IANS

ಬೀಜಿಂಗ್‌ : ಶಾಂಘೈ ಬಳಿಕ ಈಗ ಬೀಜಿಂಗ್‌ನಲ್ಲೂ ಕೊರೊನಾ ಹೆಚ್ಚುತ್ತಿದ್ದು, ಸೆಮಿ ಲಾಕ್‌ಡೌನ್‌ ಘೋಷಿಸಲಾಗಿದೆ. ಬುಧವಾರ ಹೊಸದಾಗಿ 50 ಪ್ರಕರಣಗಳು ಕಾಣಿಸಿಕೊಂಡಿದ್ದು, ಒಟ್ಟಾರೆ 500 ಸಕ್ರಿಯ ಪ್ರಕರಣಗಳಿವೆ. ಹೀಗಾಗಿ 60 ಸಬ್‌ವೇ ಸ್ಟೇಷನ್‌, ಶಾಲೆ-ಕಾಲೇಜುಗಳು, ಸಾರಿಗೆ ಸಂಚಾರವನ್ನು ಸ್ಥಗಿತ ಮಾಡಲಾಗಿದೆ.

ಒಂದು ತಿಂಗಳಿನಿಂದ ಚೀನದ ವಾಣಿಜ್ಯ ರಾಜಧಾನಿ ಶಾಂಘೈಯಲ್ಲಿ ಬಿಗಿ ಲಾಕ್‌ಡೌನ್‌ ಜಾರಿಯಲ್ಲಿದೆ. ಈಗ ರಾಜಧಾನಿ ಬೀಜಿಂಗ್‌ನಲ್ಲೂ ಕೊರೊನಾ ಹೆಚ್ಚಳವಾಗಿದ್ದು, ನಾಗರಿಕರಲ್ಲಿ ಭೀತಿ ಹುಟ್ಟಿಸುತ್ತದೆ.

ಎಲ್ಲವೂ ಅಂದುಕೊಂಡಂತಾಗಿದ್ದರೆ ಈ ವಾರವೇ ಎಲ್ಲ ಶಿಕ್ಷಣ ಸಂಸ್ಥೆಗಳು ತೆರೆಯಬೇಕಾಗಿದ್ದವು. ಈಗ ಅದನ್ನು ಮೇ 11ರ ವರೆಗೆ ಮುಂದೂಡಲಾಗಿದೆ. ರೈಲು, ಸಾರ್ವಜನಿಕ ಸಾರಿಗೆಯನ್ನೂ ಭಾಗಶಃ ಸ್ಥಗಿತ ಮಾಡಲಾಗಿದೆ. ಸದ್ಯ ಸಂಚಾರ ನಡೆಸುತ್ತಿರುವೆಡೆ ಕೊರೊನಾ ನೆಗೆಟಿವ್‌ ಪ್ರಮಾಣಪತ್ರ ಮತ್ತು ಲಸಿಕೆ ಪಡೆದ ದಾಖಲೆ ತೋರಿಸಬೇಕಾಗಿದೆ.

ಬೀಜಿಂಗ್‌ನ 158 ಬಸ್‌ ಮಾರ್ಗಗಳಲ್ಲಿ 60 ಸಬ್‌ವೇ ಸ್ಟೇಷನ್‌ಗಳನ್ನು ಮುಚ್ಚಲಾಗಿದೆ. ಇವೆಲ್ಲವೂ ಛಾಯಾಂಗ್‌ ಜಿಲ್ಲೆಯಲ್ಲೇ ಇದ್ದು, ಇಲ್ಲಿ ಪ್ರಮುಖ ನಾಯಕರು ಮತ್ತು ಅಧಿಕಾರಿಗಳ ನಿವಾಸಗಳಿವೆ. ಬೀಜಿಂಗ್‌ಗೆ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರು 10 ದಿನಗಳ ಕಾಲ ಬಿಗಿ ಕ್ವಾರಂಟೈನ್‌ನಲ್ಲಿ ಇರಬೇಕಾಗಿದೆ.

ಅತ್ತ ಶಾಂಘೈನಲ್ಲಿ ಕೊರೊನಾ ಪ್ರಕರಣ ಇಳಿಕೆಯಾಗುತ್ತಿದೆ. ಆದರೂ ಇಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್‌ ತೆರವು ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಸ್ಥಳೀಯಾಡಳಿತ ಹೇಳಿದೆ.

See also  ಉಕ್ರೇನ್ ಅನ್ನು ಮತ್ತೆ ಪುನಃ ಸ್ಥಾಪಿಸುತ್ತೇವೆ : ಅಧ್ಯಕ್ಷ ಝೆಲೆನ್ಸ್ಕಿ ಪ್ರತಿಜ್ಞೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12790
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು