News Kannada
Monday, February 06 2023

ವಿದೇಶ

ಚೀನಾ : ಟೇಕಾಫ್ ಆಗುವಷ್ಟರಲ್ಲಿ ಹೊತ್ತಿ ಉರಿದ ವಿಮಾನ

Photo Credit :

 ಚಾಂಗ್ಕಿಂಗ್: ಚೀನಾದ ವಿಮಾನ ನಿಲ್ದಾಣದ ರನ್​ವೇನಲ್ಲಿ ದಿಢೀರ್​ ತಿರುವು ಪಡೆದುಕೊಂಡ ಬೆನ್ನಲ್ಲೇ ಟಿಬೆಟ್​ ಏರ್​ಲೈನ್ಸ್​ ವಿಮಾನವೊಂದರಲ್ಲಿ ಬೆಂಕಿ ಹೊತ್ತಿ ಉರಿದಿರುವ ಆತಂಕಕಾರಿ ಘಟನೆ ನಡೆದಿದೆ. ಆದರೆ, ಸಿಬ್ಬಂದಿ ಸೇರಿದಂತೆ ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಟಿಬೆಟ್​ ಏರ್​ಲೈನ್ಸ್​ ತಿಳಿಸಿದೆ.

ವಿಮಾನವು 9 ಸಿಬ್ಬಂದಿ ಹಾಗೂ 113 ಪ್ರಯಾಣಿಕರನ್ನು ಹೊತ್ತು ಚೀನಾದ ನೈಋತ್ಯ ನಗರವಾದ ಚಾಂಗ್ಕಿಂಗ್​ನಿಂದ ಟಿಬೆಟ್‌ನ ನೈಂಗ್‌ಚಿಗೆ ಪ್ರಯಾಣ ಆರಂಭಿಸಿತ್ತು. ಆದರೆ, ವಿಮಾನದಲ್ಲಿನ ದೋಷವನ್ನು ಪತ್ತೆ ಹಚ್ಚಿದ ಸಿಬ್ಬಂದಿ ದಿಢೀರನೇ ಟೇಕಾಫ್​ ರದ್ದು ಮಾಡಿದರು. ಇದರಿಂದ ಚಾಲನೆಯಲ್ಲಿದ್ದ ವಿಮಾನವು ರನ್​ವೇಯಿಂದ ದಿಢೀರ್​ ತಿರುವು ಪಡೆದುಕೊಂಡಿದ್ದರಿಂದ ಬೆಂಕಿ ಹೊತ್ತಿಕೊಂಡಿತು ಎಂದು ಟಿಬೆಟ್​ ಏರ್​ಲೈನ್ಸ್​ ಕಂಪನಿ ತಿಳಿಸಿದೆ.

ಭಯಭೀತರಾದ ಪ್ರಯಾಣಿಕರು ಸ್ಥಳದಿಂದ ಓಡಿಹೋಗುತ್ತಿದ್ದಂತೆ ಬೆಂಕಿಯ ಜ್ವಾಲೆಯು ವಿಮಾನದ ರೆಕ್ಕೆಗಳನ್ನು ಆವರಿಸಿರುವ ವಿಡಿಯೋವನ್ನು ಚೀನಾದ ರಾಜ್ಯ ಮಾಧ್ಯಮವು ಪ್ರಸಾರ ಮಾಡಿವೆ.

ಈ ಘಟನೆಯಲ್ಲಿ ಸಿಬ್ಬಂದಿ ಸೇರಿದಂತೆ ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಗಿದೆ. ಕೆಲವರಿಗೆ ಸಣ್ಣ ಪ್ರಮಾಣದಲ್ಲಿ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಭೀಕರ ಘಟನೆ ಇನ್ನೂ ಮಾಸಿಲ್ಲ ಅಷ್ಟರಲ್ಲೇ ಚೀನಾದಲ್ಲಿ ಮತ್ತೊಂದು ದುರಂತ ನಡೆಯುವಷ್ಟರಲ್ಲಿ ಅದೃಷ್ಟವಶಾತ್​ ತಪ್ಪಿದೆ.

ಕಳೆದ ಮಾರ್ಚ್‌ನಲ್ಲಿ ಕುನ್‌ಮಿಂಗ್‌ನಿಂದ ಗುವಾಂಗ್‌ಝೌಗೆ ಪ್ರಯಾಣಿಸುತ್ತಿದ್ದ ಚೀನಾ ಈಸ್ಟರ್ನ್ ವಿಮಾನವು 29,000 ಅಡಿಗಳಿಂದ ದಿಢೀರನೇ ಕಳಗೆ ಅರಣ್ಯದ ನಡುವೆ ಬಿದ್ದು ವಿಮಾನದಲ್ಲಿದ್ದ ಎಲ್ಲಾ 132 ಜನರು ಸಾವನ್ನಪ್ಪಿದ ಭೀಕರ ಘಟನೆ ಬೆನ್ನಲ್ಲೇ ಈ ಘಟನೆ ನಡೆದಿದ್ದು, ಚೀನಾ ಜನರ ಆತಂಕಕ್ಕೆ ಎಡೆಮಾಡಿಕೊಟ್ಟಿದೆ

See also  ರಷ್ಯಾ ಪಡೆಗಳ ಶೆಲ್ ದಾಳಿಯಲ್ಲಿ ಹಾರ್ಕಿವ್‌ನಲ್ಲಿ ನಾಲ್ವರು ಸಾವು, 9 ಜನರಿಗೆ ಗಾಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು