News Kannada
Thursday, December 01 2022

ವಿದೇಶ

ಕರೊನಾ ಸೋಂಕು ಇಲ್ಲದಿದ್ದರೂ ಸಾವಿರಾರು ಮಂದಿಯನ್ನು ಕ್ವಾರಂಟೈನ್ ಮಾಡಿದ ಚೀನಾ

Photo Credit :

ಬೀಜಿಂಗ್​: ವಿಶ್ವದಾದ್ಯಂತ ಕರೊನಾ ವೈರಸ್​ ಪರಿಚಯಿಸಿದ ಚೀನಾ ಇದೀಗ ಮತ್ತೆ ಕೊವಿಡ್​ ಸಂಕಷ್ಟವನ್ನು ಎದುರಿಸುತ್ತಿದೆ. ಎಲ್ಲೆಡೆ ಕಡಿಮೆಯಾದ ವೈರಸ್​​​ ಪ್ರಭಾವ ಈಗ ಚೀನಾದಲ್ಲಿ ಮುಂದುವರಿದಿದೆ.

ಮೊಟ್ಟ ಮೊದಲ ಬಾರಿಗೆ ಕರೊನಾ ಸೋಂಕು ಪತ್ತೆಯಾಗಿದ್ದ ಚೀನಾದ ವುಹಾನ್​ ನಗರದಲ್ಲೂ ಸಹ ಕರೊನಾ ರಣಕೇಕೆ ಮುಂದುವರಿದಿದೆ.

ಹೀಗಾಗಿ ಹಲವು ನಗರಗಳಲ್ಲು ಮುಂದುವರಿದಿದ್ದು, ಲಾಕ್​ಡೌನ್​ ಸೂತ್ರವನ್ನೇ ಅಳವಡಿಸಿದೆ.

ಇನ್ನು ಶಾಂಘೈ ನಗರದಲ್ಲಿ ಕೆಲ ದಿನಗಳಿಂದ ಲಾಕ್​ಡೌನ್​ ಜಾರಿಯಲ್ಲಿದ್ದು, ಓಮಿಕ್ರ್ಯಾನ್​ ಲಕ್ಷಣಗಳು ಕೂಡ ಕಂಡುಬಂದಿರುವುದರಿಂದ ಭಾರೀ ಕಟ್ಟೆಚ್ಚರ ವಹಿಸಲಾಗುತ್ತಿದೆ. ಸದ್ಯಕ್ಕೆ ಶಾಂಘೈ ನಗರದಲ್ಲಿ ಏಪ್ರಿಲ್​​ ನಿಂದ ಹೋಟೆಲ್​ಗಳು, ಶಾಲೆಗಳು, ಕಚೇರಿ ಹೀಗೆ ಯಾವುಂದೂ ತೆರದಿಲ್ಲ. ಸದ್ಯ ಭಯದ ವಾತಾವರಣವಿದೆ.

ಈ ನಡುವೆ ಇಲ್ಲಿನ ಅಧಿಕಾರಿಗಳು ಯಡವಟ್ಟು ಮಾಡಿಕೊಂಡಿದೆ. ಅದೇನೆಂದರೆ ಕೇವಲ 26 ಮಂದಿಯಲ್ಲಿ ವೈರಸ್​ ಕಾಣಿಸಿಕೊಂಡಿದ್ದರಿಂದ ಸೋಂಕು ತಗುಲದ ಬರೋಬ್ಬರಿ 13 ಸಾವಿರ ಮಂದಿಯನ್ನು ಕ್ವಾರಂಟೇನ್​​ನಲ್ಲಿಡಲಾಗಿದೆ. ಇದು ಇಲ್ಲಿನ ನಾಗರಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ದಕ್ಷಿಣ ಬೀಜಿಂಗ್​ನಲ್ಲೂ ಸಹ ಇದೇ ರೀತಿ ಜನರನ್ನು ಮನೆಯಲ್ಲೇ ಕ್ವಾರಂಟೈನ್​​ ​ ಮಾಡಲಾಗಿದೆ. ಇಲ್ಲಿನ ಜನರು ಹೊರಗೆ ಬಂದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಇನ್ನು ತಿನ್ನಲು ಆಹಾರವಿಲ್ಲದೇ ಇಲ್ಲಿನ ಜನರು ಪರದಾಡುತ್ತಿದ್ದಾರೆ.

See also  ರಷ್ಯಾ ನೀಡಿದ್ದ ಶರಣಾಗತಿ ಗಡುವನ್ನು ತಿರಸ್ಕರಿಸಿದ ಉಕ್ರೇನ್‌ !
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

1616

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು