News Kannada
Wednesday, February 01 2023

ವಿದೇಶ

ಆರ್ಥಿಕ ಬಿಕ್ಕಟ್ಟಿನಲ್ಲಿ ತತ್ತರಿಸಿದ ಶ್ರೀಲಂಕಾ: ಲೀಟರ್​ ಪೆಟ್ರೋಲ್​ 420, ಡೀಸೆಲ್ 400!

Sri Lanka: Sri Lanka to get new president in 7 days
Photo Credit :

ಶ್ರೀಲಂಕಾ: ಆರ್ಥಿಕ ಬಿಕ್ಕಟ್ಟಿನಿಂದ ಈಗಾಗಲೇ ತತ್ತರಿಸಿರುವ ಶ್ರೀಲಂಕಾದಲ್ಲಿ ಇಂಧನ ಕೊರತೆಯೂ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಮಂಗಳವಾರ ದಾಖಲೆಯ ಗರಿಷ್ಠ ಮಟ್ಟಕ್ಕೆ ಏರಿದೆ. ಲೀಟರ್ ಪೆಟ್ರೋಲ್ ಬೆಲೆ ಶೇ.24.3ರಷ್ಟು, ಡೀಸೆಲ್ ಬೆಲೆ ಶೇ.38.4ರಷ್ಟು ಏರಿಕೆಯಾಗಿದ್ದು, ಜನರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇದೀಗ 1 ಲೀಟರ್ ಪೆಟ್ರೋಲ್ ಬೆಲೆ 82 ರೂಪಾಯಿ ಏರಿಕೆಯಾಗಿ 420 ರೂಪಾಯಿಗೆ ತಲುಪಿದೆ. 111 ರೂ.ಗಳ ಏರಿಕೆ ಕಂಡ ಡೀಸೆಲ್​ 1 ಲೀಟರ್​ಗೆ 400 ರೂ. ಆಗಿದೆ. ಲಂಕಾದ ಪೆಟ್ರೋಲಿಯಂ ಕಾರ್ಪೊರೇಷನ್ ಮಂಗಳವಾರ ಇಂಧನ ಬೆಲೆಯನ್ನು ಪರಿಷ್ಕರಣೆ ಮಾಡಿದೆ. 15 ದಿನಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಪರಿಷ್ಕರಣೆ ಮಾಡಲಾಗುವುದು ಎಂದು ಇಂಧನ ಸಚಿವರು ತಿಳಿಸಿದ್ದಾರೆ.

ಶ್ರೀಲಂಕಾದಲ್ಲಿ ತೈಲದರ ವಿಪರೀತ ಏರಿಕೆಯಿಂದ ಆಟೋ ಚಾಲಕರಿಗೆ ಹೆಚ್ಚಿನ ಹೊರೆಯಾಗಲಿದೆ. ಪ್ರಯಾಣಿಕರಿಂದ ಮೊದಲ ಕಿಲೋಮೀಟರ್​ಗೆ 90 ರೂಪಾಯಿ, ಎರಡನೇ ಕಿಲೋಮೀಟರ್​ಗೆ 80 ರೂಪಾಯಿ ಶುಲ್ಕ ವಿಧಿಸಲಾಗುವುದು ಎಂದು ತಿಳಿದುಬಂದಿದೆ.

ಈಗಾಗಲೇ ಸಾರಿಗೆ ವೆಚ್ಚವನ್ನು ಕಡಿತ ಮಾಡಲು ಸರ್ಕಾರ ಶಾಲಾ- ಕಾಲೇಜುಗಳಿಗೆ ರಜೆ ನೀಡಿದೆ. ಅಲ್ಲದೇ, ಸರ್ಕಾರ ಕಚೇರಿ ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡಲು ಆದೇಶಿಸಿದೆ.

See also  ವಿದ್ಯುತ್, ಪೆಟ್ರೋಲ್, ಡೀಸೆಲ್‌ ಹಾಗೂ ಗ್ಯಾಸ್ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು