News Kannada
Wednesday, February 08 2023

ವಿದೇಶ

ನೈಜಿರೀಯಾ: ಉಗ್ರರಿಂದ 50 ರೈತರ ಹತ್ಯೆ, ಕೆಲವರ ಸ್ಥಿತಿ ಚಿಂತಾಜನಕ

Two terrorists killed near Line of Control
Photo Credit :

ನೈಜೀರಿಯಾ: ನೈಜಿರೀಯಾ ಮಿಲಿಟರಿಗೆ ಮಾಹಿತಿಯನ್ನು ನೀಡುತ್ತಿರುವುದಾಗಿ ಆರೋಪಿಸಿ ಬೋಕೋ ಹರಾಂ ಉಗ್ರರು ಕನಿಷ್ಠ 50 ಮಂದಿ ರೈತರನ್ನು ಹತ್ಯೆಗೈಯುವ ಮೂಲಕ ನರಮೇಧ ನಡೆಸಿರುವ ಘಟನೆ ದೇಶದ ಈಶಾನ್ಯದಲ್ಲಿರುವ ಕ್ಯಾಮೆರೂನಿಯನ್ ಗಡಿಯಲ್ಲಿರುವ ಬೊರ್ನೊ ಪ್ರಾಂತ್ಯದಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.

ಬೋಕೋ ಹರಾಂ ಉಗ್ರರ ದಾಳಿಯಲ್ಲಿ ಗಾಯಗೊಂಡವರ ಸಂಖ್ಯೆ ಅಧಿಕವಾಗಿದ್ದು, ಇದರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿ ವಿವರಿಸಿದೆ. ಸ್ಥಳೀಯ ನಿವಾಸಿಗಳ ಪ್ರಕಾರ ಇದು ಬೋಕೋ ಹರಾಂ ಉಗ್ರಗಾಮಿಗಳ ಕೃತ್ಯವಾಗಿದೆ ಎಂದು ಆರೋಪಿಸಿದ್ದಾರೆ.

ಸ್ಥಳೀಯ ರೈತರೊಬ್ಬರ ಪ್ರಕಾರ, ಈ ಘಟನೆಯಿಂದ ನಾವೆಲ್ಲ ಭಯಭೀತರಾಗಿದ್ದೇವೆ. ನಾವು ಈಗಾಗಲೇ 50 ಮಂದಿಯ ಶವವನ್ನು ಹೂತಿದ್ದೇವೆ. ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಉಗ್ರರು ದಾಳಿ ನಡೆಸಿದ್ದರು. ಉಳಿದವರು ಕಟ್ಟಿಗೆಗಳನ್ನು ಸಂಗ್ರಹಿಸಲು ತೆರಳಿದ್ದು ಅವರ ಮೇಲೂ ಮಾರಣಾಂತಿಕ ದಾಳಿ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.

ಬೈಕ್ ಗಳಲ್ಲಿ ಆಗಮಿಸಿದ್ದ ಬೋಕೋ ಹರಾಮ್ ಉಗ್ರರು ಏಕಾಏಕಿ ಗುಂಡಿನ ಸುರಿಮಳೆ ಸುರಿಸಿದ್ದರು. ನಮ್ಮ ಕಣ್ಣೆದುರೇ 50ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವುದಾಗಿ ರೈತರು ತಿಳಿಸಿರುವುದಾಗಿ ವರದಿಯಾಗಿದೆ.

ನೈಜಿರೀಯನ್ ಮಿಲಿಟರಿ ಪರ ಬೇಹುಗಾರಿಕೆ ಮಾಡಿ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆಂದು ಆರೋಪಿಸಿ ಬೋಕೋ ಹರಾಮ್ ಉಗ್ರರು ರೈತರು, ದನಗಾಹಿಗಳು, ಕಾರ್ಮಿಕರನ್ನು ಗುರಿಯಾಗಿರಿಸಿ ದಾಳಿ ನಡೆಸುತ್ತಿರುವುದಾಗಿ ವರದಿ ಹೇಳಿದೆ.

See also  ಫಿಲಿಪೈನ್ಸ್‌ ನಲ್ಲಿ ಅಪ್ಪಳಿಸಿದ ರೈ ಚಂಡಮಾರುತ: ಸಾವಿನ ಸಂಖ್ಯೆ 75ಕ್ಕೆ ಏರಿಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು