News Kannada
Wednesday, July 06 2022

ವಿದೇಶ

ಸಂಭಾವ್ಯ ಹೊಸ ಕೋವಿಡ್ ಅಲೆಯ ಬಗ್ಗೆ ಇರಾಕ್ ನಲ್ಲಿ ಕಟ್ಟೆಚ್ಚರ - 1 min read

Photo Credit :

ಬಾಗ್ದಾದ್: ದೇಶದಲ್ಲಿ ಹೊಸ ಕೋವಿಡ್ -19 ಅಲೆಯ ಸಾಧ್ಯತೆಯ ಬಗ್ಗೆ ಇರಾಕ್ ಗೆ ಆರೋಗ್ಯ ಸಚಿವಾಲಯ ಎಚ್ಚರಿಕೆ ನೀಡಿದ್ದು, ಆರೋಗ್ಯ ಕ್ರಮಗಳನ್ನು ಅನುಸರಿಸಲು ಮತ್ತು ಲಸಿಕೆ ಪಡೆಯುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ಕೋವಿಡ್ ವೈರಸ್ ಸಾಂಕ್ರಾಮಿಕ ರೋಗದ ಸಮಸ್ಯೆ ಇನ್ನೂ ಇದೆ. ಹೊಸ ರೂಪಾಂತರಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ” ಎಂದು ಸಚಿವಾಲಯದ ವಕ್ತಾರ ಸೈಫ್ ಅಲ್-ಬದ್ರ್ ಅವರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗದೊಂದಿಗೆ ಎಲ್ಲಾ ಬೆಳವಣಿಗೆಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ, ಮತ್ತು ಇರಾಕ್ ಗೆ ಹತ್ತಿರವಿರುವ ದೇಶಗಳಲ್ಲಿ ಸಂಭವಿಸುತ್ತಿರುವಂತೆ ಇಲ್ಲಿಯೂ ಸಾಂಕ್ರಾಮಿಕ ಅಲೆ ಇರಬಹುದು ಎಂದು ಅವರು ಹೇಳಿದರು.

ಶುಕ್ರವಾರ, ಇರಾಕ್ ನಲ್ಲಿ  339 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿದ್ದು, ರಾಷ್ಟ್ರವ್ಯಾಪಿ ಪ್ರಕರಣಗಳ ಸಂಖ್ಯೆ 2,331,487 ಕ್ಕೆ ಏರಿದೆ, ಸಾವಿನ ಸಂಖ್ಯೆ 25,226 ಕ್ಕೆ ಏರಿದೆ.

ಇರಾಕ್ ನಲ್ಲಿ ಒಟ್ಟು ಚೇತರಿಸಿಕೊಂಡವರ ಸಂಖ್ಯೆ 177ರಷ್ಟು ಏರಿಕೆಯಾಗಿ 2,303,954ಕ್ಕೆ ತಲುಪಿದೆ.

ಕಳೆದ 24 ಗಂಟೆಗಳಲ್ಲಿ ಇರಾಕ್ ನಲ್ಲಿ ಒಟ್ಟು 12,037 ಜನರಿಗೆ ಕೋವಿಡ್ -19 ವಿರುದ್ಧ ಲಸಿಕೆ ನೀಡಲಾಗಿದ್ದು, ಒಟ್ಟು ಡೋಸ್ ಗಳ ಸಂಖ್ಯೆ 10,785,973 ಕ್ಕೆ ತಲುಪಿದೆ ಎಂದು ಸಚಿವಾಲಯ ತಿಳಿಸಿದೆ.

See also  ಉತ್ತರ ಕೊರಿಯಾ ಪರಮಾಣು ಅಸ್ತ್ರ ಪ್ರಯೋಗಿಸಿದರೆ ಕಠಿಣ ನಿರ್ಬಂಧ: ಅಮೆರಿಕ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

30409
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು