News Kannada
Wednesday, September 28 2022

ವಿದೇಶ

ಲಂಡನ್: ಬ್ರಿಟನ್ ಪ್ರಧಾನಿ ಅಭ್ಯರ್ಥಿ ರೇಸ್ ನಲ್ಲಿ ರಿಷಿ ಸುನಕ್ ಗೆ ಮುನ್ನಡೆ - 1 min read

Rishi Sunak leads in uk's prime ministerial candidate race
Photo Credit :

ಲಂಡನ್: ಬ್ರಿಟನ್ ಪ್ರಧಾನಿ ಅಭ್ಯರ್ಥಿ ರೇಸ್ ನಲ್ಲಿ ಮಾಜಿ ಚಾನ್ಸಿಲರ್, ಭಾರತ ಮೂಲದ ರಿಷಿ ಸುನಕ್ ಅವರು ಮೊದಲ ಸುತ್ತಿನ ಮತದಾನದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಕನ್ಸರ್ವೇಟಿವ್ ಪಕ್ಷದ ನಾಯಕ ಮತ್ತು ಬ್ರಿಟನ್ ಪ್ರಧಾನಿ ಹುದ್ದೆಗೆ ನಡೆದ ಚುನಾವಣೆಯ ಮೊದಲ ಸುತ್ತಿನಲ್ಲಿ ಸುನಕ್ 88 ಮತಗಳನ್ನು ಪಡೆದು, ಪ್ರತಿಸ್ಪರ್ಧಿಗಳಾದ ಪೆನ್ನಿ ಮಾರ್ಡಂಟ್ (67) ಮತ್ತು ತ್ರುಸ್ ಲಿಜ್ (50) ಅವರಿಗಿಂತ ಮುಂದಿದ್ದಾರೆ.
ಹಣಕಾಸು ಸಚಿವ ನದೀಮ್ ಝುಹಾನಿ ಮತ್ತು ಮಾಜಿ ಸಚಿವ ಜೆರೆಮಿ ಹಂಟ್ ಅವರು ನಿರ್ಗಮಿಸಿದ್ದಾರೆ.

ಭಾರತ ಮೂಲದ ಸಂಸದ- ಅಟಾರ್ನಿ ಜನರಲ್ ಸ್ಯೂಯೆಲ್ಲಾ ಬ್ರೆವೆರ್‍ಮನ್ ಕೂಡಾ ಸ್ಪರ್ಧೆಯಲ್ಲಿದ್ದಾರೆ. ಚುನಾವಣೆ ವೇಳಾಪಟ್ಟಿಯಂತೆ, ಬೋರಿಸ್ ಜಾನ್ಸನ್ ಅವರ ಉತ್ತರಾಧಿಕಾರಿಯಾಗಿ ಕನ್ಸರ್ವೇಟಿವ್ ಪಕ್ಷದ ಮುಖಂಡನನ್ನು ಸೆಪ್ಟೆಂಬರ್ 5ರಂದು ಘೋಷಿಸಲಾಗುತ್ತಿದೆ. ಹಗರಣಗಳ ಸುಳಿಯಿಂದಾಗಿ ಕಳೆದುಕೊಂಡ ಜನಪ್ರಿಯ ಬೆಂಬಲವನ್ನು ಕನ್ಸರ್ವೇಟಿವ್ ಪಕ್ಷ ಮರು ಗಳಿಸಿಕೊಳ್ಳುವ ಪ್ರಯತ್ನದಲ್ಲಿದೆ.

ಸ್ಪರ್ಧೆಯ ಆರಂಭಿಕ ಹಂತದಲ್ಲಿ ಸುನಾಕ್, ಮಾರ್ಡೆಂಟ್ ಮತ್ತು ಲಿಝ್ ತ್ರುಸ್ ಅವರ ನಡುವೆ ಅಂತಿಮ ಸ್ಪರ್ಧೆ ಏರ್ಪಡುವ ಲಕ್ಷಣಗಳು ಕಾಣಿಸುತ್ತಿವೆ. ಆದರೂ ಕಣ ಇನ್ನೂ ಮುಕ್ತವಾಗಿರುವುದು ಸ್ಪಷ್ಟ. ಮುಂದಿನ ಸುತ್ತಿನ ಮತದಾಣದಲ್ಲಿ 358 ಮಂದಿ ಕನ್ಸರ್ವೇಟಿವ್ ಸಂಸದರು ಮತಪತ್ರದ ಮೂಲಕ ತಮ್ಮ ನಾಯಕನನ್ನು ಆಯ್ಕೆ ಮಾಡಲಿದ್ದು, ಗುರುವಾರ ಈ ಮತದಾನ ನಡೆಯಲಿದೆ. ಇದು ಅಂತಿಮವಾಗಿ ಇಬ್ಬರು ಫೈನಲಿಸ್ಟ್ ಗಳನ್ನು ಆಯ್ಕೆ ಮಾಡಲಿದೆ.

See also  ಒಬೆಸಿಟಿ: ಕಾರಣಗಳು ಮತ್ತು ತಡೆಗಟ್ಟಲು ಕೆಲವು ಆಹಾರ ಕ್ರಮಗಳು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12790
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು