News Kannada
Wednesday, September 28 2022

ವಿದೇಶ

ದೋಹಾ: ಗುಂಡು ಹಾರಿಸಿ 29 ನಾಯಿಗಳ ಹತ್ಯೆ - 1 min read

29 dogs shot dead
Photo Credit : Pixabay

ದೋಹಾ: ಗಲ್ಫ್ ಒಕ್ಕೂಟದ ರಾಷ್ಟ್ರ ಕತಾರ್‌ನ ದೋಹಾದಲ್ಲಿ ಜು. 10ರಂದು ಕಂಪೌಂಡ್ ಒಂದರ ಒಳಗೆ ಕೂಡಿಹಾಕಿ ರೈಫಲ್‌ನಿಂದ ಗುಂಡು ಹಾರಿಸಿ ಮರಿಗಳ ಸಹಿತ 29 ನಾಯಿಗಳನ್ನು ಹತ್ಯೆ ಮಾಡಿರುವ ಕೃತ್ಯ ನಡೆದಿದೆ.

ನಾಯಿಗಳನ್ನು ಅಮಾನವೀಯವಾಗಿ ಹತ್ಯೆ ಮಾಡಿರುವ ಬಗ್ಗೆ ಪ್ರಾಣಿದಯಾ ಸಂಘಟನೆಯ ಕಾರ್ಯಕರ್ತರು ಮತ್ತು ಹೋರಾಟಗಾರರು ಪ್ರಶ್ನಿಸಿದ ಬಳಿಕವಷ್ಟೇ ಪ್ರಕರಣ ಬಹಿರಂಗವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುಂಡೇಟಿನಿಂದ ಮರಿಗಳ ಸಹಿತ 29 ನಾಯಿಗಳು ಮೃತಪಟ್ಟಿವೆ. ಮೂರು ನಾಯಿಗಳು ಗಾಯಗೊಂಡಿದ್ದು, ಅವುಗಳ ಪೈಕಿ ಎರಡು ಗರ್ಭ ಧರಿಸಿದ್ದವುಗಳಾಗಿವೆ.

ಆ ಬಗ್ಗೆ ತನಿಖೆ ನಡೆಯಲಿದೆ. ಆದರೆ, ಇಸ್ಲಾಂನಲ್ಲಿ ನಾಯಿಗಳನ್ನು ಅಶುದ್ಧ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಹತ್ಯೆ ಮಾಡಿರುವ ಸಾಧ್ಯತೆಯಿದೆ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ.

ಫ್ಯಾಕ್ಟರಿಯಲ್ಲಿದ್ದ ಸೆಕ್ಯುರಿಟಿ ಗಾರ್ಡ್‌ಗಳ ಬಳಿ, ನಾಯಿ ನಮ್ಮಲ್ಲೊಬ್ಬರ ಮಗುವಿಗೆ ಕಚ್ಚಿದೆ ಎಂದು ಹೇಳಿ, ಒಳಪ್ರವೇಶಿಸಿದ್ದಾರೆ. ಬಳಿಕ ರೈಫಲ್‌ನಿಂದ ಗುಂಡು ಹಾರಿಸಿ ಹತ್ಯೆ ಮಾಡಿದ್ದಾಗಿ ಮತ್ತೋರ್ವ ಕಾರ್ಯಕರ್ತ ತಿಳಿಸಿದ್ದಾರೆ.

ನಾಯಿಗಳ ಸಾಮೂಹಿಕ ಹತ್ಯೆ ಬಗ್ಗೆ ಕತಾರ್ ಆಡಳಿತ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ಕತಾರ್‌ ಆಡಳಿತಗಾರರ ಸಹೋದರಿ ಶೇಖಾ ಅಲ್ ಮಯಾಸ ಬಿಂಟ್ ಹಮಾದ್ ಅಲ್ ಥಾನಿ ಈ ಕೃತ್ಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಖಂಡಿಸಿದ್ದಾರೆ.

See also  190 ವರ್ಷ ಪೂರೈಸಿ ವಿಶ್ವ ದಾಖಲೆ ಬರೆದ ಆಮೆ ಜೊನಾಥನ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12790
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು