News Kannada
Wednesday, August 10 2022

ವಿದೇಶ

ಬಾಂಗ್ಲಾದೇಶ: ಹಳಿ ದಾಟುತ್ತಿದ್ದ ಮಿನಿ ಬಸ್‌ಗೆ ರೈಲು ಡಿಕ್ಕಿ ಹೊಡೆದು 11 ಮಂದಿ ಸಾವು - 1 min read

Bangladesh: At least 11 killed as train collides with minibus crossing tracks

ಬಾಂಗ್ಲಾದೇಶ: ಹಳಿ ದಾಟುತ್ತಿದ್ದ ಮಿನಿ ಬಸ್‌ಗೆ ರೈಲು ಡಿಕ್ಕಿ ಹೊಡೆದು 11 ಮಂದಿ ಸಾವನ್ನಪ್ಪಿರುವು ದುರಂತ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ. ಬಾಂಗ್ಲಾದೇಶದ ಚಟ್ಟೋಗ್ರಾಮ್ ಜಿಲ್ಲೆಯಲ್ಲಿ ಶುಕ್ರವಾರ ಸಂಜೆ ಈ ಘಟನೆ ನಡೆದಿದೆ.

ಅಮನ್ ಬಜಾರ್ ಪ್ರದೇಶದ ಕೋಚಿಂಗ್ ಸೆಂಟರ್‌ನ ಕೆಲವು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಮಿನಿ ಬಸ್‌ನಲ್ಲಿ ಕೊಯಾಚೋರೊ ಎಂಬ ಜಲಪಾತವನ್ನು ವೀಕ್ಷಿಸಲು ತೆರಳಿ,  ವಾಪಸಾಗುವಾಗ ಈ ಘಟನೆ ದುರಂತ ನಡೆದಿದೆ.

ರೈಲ್ವೆ ಕ್ರಾಸಿಂಗ್ ಬಳಿ ಗೇಟ್ ಹಾಕದ ಕಾರಣ ಮಿನಿ ಬಸ್ ಯಥಾಸ್ಥಿತಿಯಲ್ಲಿ ಸಾಗಿದೆ. ಅದೇ ವೇಳೆ ವೇಗವಾಗಿ ಬಂದ ಎಕ್ಸ್‌ಪ್ರೆಸ್ ರೈಲು ಬಸ್‌ಗೆ ಡಿಕ್ಕಿ ಹೊಡೆದು ಒಂದು ಕಿಲೋಮೀಟರ್ ದೂರದವರೆಗೆ ರೈಲು ಮಿನಿ ಬಸ್ ಅನ್ನು ಎಳೆದೊಯ್ದಿದೆ. ಈ ಘಟನೆಯಲ್ಲಿ ಬಸ್ಸಿನಲ್ಲಿದ್ದ 11 ಮಂದಿ ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ.

ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಅಧಿಕಾರಿಗಳು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ನಿರ್ಲಕ್ಷ್ಯ ವಹಿಸಿದ ಗೇಟ್‌ಮ್ಯಾನ್‌ನನ್ನು ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

See also  ಮೈಸೂರು: ಮೋದಿ@20 ಕೃತಿ ಕುರಿತು ವಿಚಾರ ಸಂಕಿರಣ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12792
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು