News Kannada
Thursday, August 11 2022

ವಿದೇಶ

ಪಾಕಿಸ್ಥಾನ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಪ್ರಧಾನಿ ಶಹಬಾಜ್‌ಗೆ ಶೋಕಾಸ್ ನೋಟಿಸ್ - 1 min read

Pakistan PM Shahbaz Khan issued show cause notice in money laundering case

ಪಾಕಿಸ್ಥಾನ: ಬರೋಬ್ಬರಿ 16 ಶತಕೋಟಿ ಡಾಲರ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸೆ.7ರಂದು ವಿಚಾರಣೆಗೆ ಹಾಜರಾಗುವಂತೆ, ಪಾಕಿಸ್ಥಾನದ ವಿಶೇಷ ನ್ಯಾಯಾಲಯ ಪಾಕ್ ಪ್ರಧಾನಿ ಶಹಬಾಜ್ ಶರೀಫ್ ಮತ್ತು ಆತನ ಪುತ್ರ ಹಂಜ ಶಹಬಾಜ್‌ಗೆ ಶನಿವಾರ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ.

ಅಕ್ರಮ ಹಣ ವರ್ಗಾವಣೆ ಮತ್ತು ಭ್ರಷ್ಟಾಚಾರ ಆರೋಪದಲ್ಲಿ ಪಾಕಿಸ್ಥಾನದ ಫೆಡರಲ್ ಇನ್‌ವೆಸ್ಟಿಗೇಶನ್ ಏಜೆನ್ಸಿಯು (ಎಫ್‌ಐಎ) 70 ವರ್ಷದ ಶಹಬಾಜ್ ಮತ್ತವರ ಪುತ್ರರಾದ ಹಂಜ, ಸುಲೈಮಾನ್ ವಿರುದ್ಧ 2020ರ ನವೆಂಬರ್‌ನಲ್ಲಿ ಪ್ರಕರಣ ದಾಖಲಿಸಿತ್ತು. ಪ್ರಕರಣದ ವಿಚಾರಣೆ ನಡೆಸುತ್ತಿರುವ ಲಾಹೋರ್‌ನ ವಿಶೇಷ ನ್ಯಾಯಾಲಯವು ತಂದೆ, ಮಗನಿಗೆ ಈಗಾಗಲೆ ನಿರೀಕ್ಷಣಾ ಜಾಮೀನು ನೀಡಿದೆ. ಆದರೆ ತಂದೆ -ಮಗ ಶನಿವಾರ ಕೋರ್ಟ್‌ಗೆ ವಿಚಾರಣೆಗೆ ಹಾಜರಾಗಿರಲಿಲ್ಲ.

ಶಹಬಾಜ್ ಅವರ ಆರೋಗ್ಯ ಸರಿಯಿಲ್ಲದ ಕಾರಣ ಪ್ರಯಾಣ ಕೂಡದೆಂದು ವೈದ್ಯರು ಸಲಹೆ ನೀಡಿದ್ದಾರೆ. ಹಾಗಾಗಿ ಇದೊಂದು ಬಾರಿ ವಿನಾಯಿತಿ ನೀಡಿ ಎಂದು ಶಹ್‌ಬಾಜ್ ಪರ ವಕೀಲ ಅಮ್ಜದ್ ಪರ್ವೇಜ್ ನ್ಯಾಯಾಲಯವನ್ನು ಕೋರಿದ್ದರು. ತನ್ನ ಕಕ್ಷಿದಾರನಿಗೆ ತೀವ್ರ ಬೆನ್ನು ನೋವು, ಹಾಗಾಗಿ ವಿಶ್ರಾಂತಿ ಅಗತ್ಯವಿದೆ ಎಂದು ಹಂಝ ಪರ ವಕೀಲ ರಾವ್ ಔರಂಗಜೇಬ್ ನ್ಯಾಯಾಲಯಕ್ಕೆ ತಿಳಿಸಿದರು. ಎಫ್‌ಐಎ ಪ್ರಾಸಿಕ್ಯೂಟರ್ ಫಾರೂಕ್ ಬಜ್ವಾ ಆಕ್ಷೇಪ ವ್ಯಕ್ತಪಡಿಸದ ಕಾರಣ ತಂದೆ-ಮಗನಿಗೆ ನ್ಯಾಯಾಲಯ ವಿನಾಯಿತಿ ನೀಡಿತು.

See also  ಬೆಳ್ತಂಗಡಿ: ಅಪರ ಜಿಲ್ಲಾಧಿಕಾರಿ ಅವರಿಂದ ಸಾರ್ವಜನಿಕ ಅಹವಾಲು ಸ್ವೀಕಾರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12792
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು