ಕಾಬೂಲ್: ಅಫ್ಘಾನಿಸ್ತಾನದ ದಕ್ಷಿಣ ಹೆಲ್ಮಂಡ್ ಪ್ರಾಂತ್ಯದ ನಾಡ್ ಅಲಿ ಜಿಲ್ಲೆಯಲ್ಲಿ ಸ್ಫೋಟಕ ಸಾಧನ ಸ್ಫೋಟಗೊಂಡ ಪರಿಣಾಮ ಮೂವರು ಮಕ್ಕಳು ಮೃತಪಟ್ಟು, ಇತರ ಮೂವರು ಗಾಯಗೊಂಡಿದ್ದಾರೆ.
ಹಿವಾಡ್ ಬಜಾರ್ ಪ್ರದೇಶದಲ್ಲಿ ಶನಿವಾರ ಮಧ್ಯಾಹ್ನ ಸ್ಫೋಟ ಸಂಭವಿಸಿದ್ದು, ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ ಮತ್ತು ಇತರ ಮೂವರು ಗಾಯಗೊಂಡಿದ್ದಾರೆ ಎಂದು ಪ್ರಾಂತೀಯ ಪೊಲೀಸ್ ವಕ್ತಾರ ಅಹ್ಮದ್ ಜಾನ್ ತಿಳಿಸಿದ್ದಾರೆ.
ಮೃತರೆಲ್ಲರೂ ಧಾರ್ಮಿಕ ಶಾಲೆಯ ವಿದ್ಯಾರ್ಥಿಗಳಾಗಿದ್ದರು ಎಂದು ಅಧಿಕಾರಿಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿದೆ.
ಯುದ್ಧಪೀಡಿತ ಅಫ್ಘಾನಿಸ್ತಾನದ ಪಶ್ಚಿಮ ಹೆರಾತ್ ಪ್ರಾಂತ್ಯದಲ್ಲಿ ಶುಕ್ರವಾರ ನಡೆದ ಭೀಕರ ಸ್ಫೋಟದಲ್ಲಿ ಪ್ರಸಿದ್ಧ ಧರ್ಮಗುರು ಸೇರಿದಂತೆ 18 ಮಂದಿ ಮೃತಪಟ್ಟು, 23 ಮಂದಿ ಗಾಯಗೊಂಡಿದ್ದರು.