ಖಾರ್ಟೂಮ್, ಸೆಪ್ಟೆಂಬರ್ 5: ಸುಡಾನ್ ನಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆ ಮತ್ತು ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ 112 ಕ್ಕೆ ಏರಿದೆ ಎಂದು ದೇಶದ ರಾಷ್ಟ್ರೀಯ ನಾಗರಿಕ ರಕ್ಷಣಾ ಮಂಡಳಿ ತಿಳಿಸಿದೆ.
“ಧಾರಾಕಾರ ಮಳೆ ಮತ್ತು ಪ್ರವಾಹದಿಂದಾಗಿ 112 ಜನರು ಸಾವನ್ನಪ್ಪಿದ್ದಾರೆ ಮತ್ತು 115 ಜನರು ಗಾಯಗೊಂಡಿದ್ದಾರೆ” ಪ್ರಸಕ್ತ ಮಳೆಗಾಲದಲ್ಲಿ ದೇಶಾದ್ಯಂತ ಒಟ್ಟು 34,944 ಮನೆಗಳು ನಾಶವಾಗಿವೆ ಮತ್ತು 49,096 ಇತರ ಮನೆಗಳಿಗೆ ಹಾನಿಯಾಗಿದೆ ಎಂದು ಕೌನ್ಸಿಲ್ ಹೇಳಿದೆ.
ಉತ್ತರ, ಮಧ್ಯ ಮತ್ತು ಪಶ್ಚಿಮ ಸುಡಾನ್ನ 250 ಕ್ಕೂ ಹೆಚ್ಚು ಹಳ್ಳಿಗಳು ಒಂದು ತಿಂಗಳಿನಿಂದ ಧಾರಾಕಾರ ಮಳೆಯಿಂದಾಗಿ ಹಾನಿಗೀಡಾಗಿವೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಆಗಸ್ಟ್ 21 ರಂದು, ಸುಡಾನ್ ಮಂತ್ರಿಮಂಡಲವು ಪ್ರವಾಹ ಪೀಡಿತ ಆರು ರಾಜ್ಯಗಳಾದ ನೈಲ್, ಗೆಜಿರಾ, ವೈಟ್ ನೈಲ್, ಪಶ್ಚಿಮ ಕೊರ್ಡೋಫಾನ್, ದಕ್ಷಿಣ ದರ್ಫರ್ ಮತ್ತು ಕಸಲಾಗಳಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿತು.
ಜೂನ್ ನಿಂದ ಸುಡಾನ್ನಾದ್ಯಂತ ಪ್ರವಾಹ ಮತ್ತು ಭಾರಿ ಮಳೆಯಿಂದಾಗಿ ಸುಮಾರು 1,36,000 ಜನರು ಬಾಧಿತರಾಗಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿ ತಿಳಿಸಿದೆ.
ಸುಡಾನ್ ಆಗಾಗ್ಗೆ ಜೂನ್ ನಿಂದ ಅಕ್ಟೋಬರ್ ವರೆಗೆ ಭಾರಿ ಮಳೆಯಿಂದ ಉಂಟಾದ ಪ್ರವಾಹಕ್ಕೆ ಸಾಕ್ಷಿಯಾಗುತ್ತದೆ.