News Kannada
Thursday, December 08 2022

ವಿದೇಶ

ಕೊಲಂಬೊ: ಬೆಂಕಿ ಅವಘಡ, 80 ಮನೆಗಳಿಗೆ ಹಾನಿ

A fire broke out at a hotel in east Delhi
Photo Credit : Pixabay

ಕೊಲಂಬೊ, ಸೆ.28: ಕೊಲಂಬೊದ ಜನನಿಬಿಡ ಪ್ರದೇಶದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ 80 ಮನೆಗಳು ನಾಶವಾಗಿದ್ದು, ಸುಮಾರು 220 ಜನರು ನಿರಾಶ್ರಿತರಾಗಿದ್ದಾರೆ ಎಂದು ಶ್ರೀಲಂಕಾ ಪೊಲೀಸರು ಬುಧವಾರ ತಿಳಿಸಿದ್ದಾರೆ.

ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ತೋಟಲಂಗಾದ ಕಜೀಮಾವಟ್ಟೆ ಫ್ಲ್ಯಾಟ್ಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯನ್ನು ಹತೋಟಿಗೆ ತರಲು ಅಗ್ನಿಶಾಮಕ ಸಿಬ್ಬಂದಿಗೆ ಹಲವಾರು ಗಂಟೆಗಳ ಸಮಯ ಹಿಡಿಯಿತು ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಹನ್ನೆರಡು ಅಗ್ನಿಶಾಮಕ ಟ್ರಕ್ಕುಗಳನ್ನು ಸೇವೆಗೆ ನಿಯೋಜಿಸಲಾಯಿತು.

ಘಟನೆಯಲ್ಲಿ ಯಾವುದೇ ಸಾವುನೋವುಗಳು ವರದಿಯಾಗಿಲ್ಲ, ಮತ್ತು ಪೀಡಿತರನ್ನು ಸಮುದಾಯ ಕೇಂದ್ರಗಳು ಮತ್ತು ಪ್ರಾರ್ಥನಾ ಸ್ಥಳಗಳಲ್ಲಿ ಇರಿಸಲಾಗಿದೆ.

ಬೆಂಕಿಯ ಕಾರಣವನ್ನು ಪೊಲೀಸರು ಇನ್ನೂ ನಿರ್ಧರಿಸಿಲ್ಲ ಮತ್ತು ಒಟ್ಟು ಆಸ್ತಿ ಹಾನಿಯನ್ನು ಅಂದಾಜಿಸಲಾಗಿಲ್ಲ.

ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರು ತಮ್ಮ ಕಾರ್ಯದರ್ಶಿ ಸಮನ್ ಏಕನಾಯಕೆ ಅವರಿಗೆ ಬೆಂಕಿಯಿಂದ ಹಾನಿಗೊಳಗಾದ ಎಲ್ಲಾ ಜನರಿಗೆ ತಕ್ಷಣದ ಪರಿಹಾರವನ್ನು ಒದಗಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದರು.

See also  ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟು : ರಾಜೀನಾಮೆ ಕೊಟ್ಟ ಸೆಂಟ್ರಲ್ ಬ್ಯಾಂಕ್ ಗವರ್ನರ್‌
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

30409

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು