ವೆಲ್ಲಿಂಗ್ಟನ್: ನ್ಯೂಜಿಲೆಂಡ್‌ನ ನೂತನ ಪ್ರಧಾನ ಮಂತ್ರಿಯಾಗಿ ಕ್ರಿಸ್ ಹಿಪ್ಕಿನ್ಸ್ ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು.
ಸಂಸತ್ತಿನಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಹಿಪ್ಕಿನ್ಸ್ ಅಧಿಕೃತವಾಗಿ ಉನ್ನತ ಹುದ್ದೆಯನ್ನು ವಹಿಸಿಕೊಂಡರು ಮತ್ತು ಕಾರ್ಮೆಲ್ ಸೆಪಿಲೋನೈ ಉಪ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪ್ರಧಾನಿ ಹಿಪ್ಕಿನ್ಸ್ ಮುಂದಿನ ವಾರ ಸಚಿವ ಸಂಪುಟವನ್ನು ಪುನರ್ ರಚಿಸಲಿದ್ದಾರೆ. ಉನ್ನತ ನಾಯಕತ್ವದ ಪಾತ್ರದ ಜೊತೆಗೆ, ಹಿಪ್ಕಿನ್ಸ್ ಸ್ವತಃ ರಾಷ್ಟ್ರೀಯ ಭದ್ರತೆ ಮತ್ತು ಗುಪ್ತಚರ ಸಚಿವರಾಗಿದ್ದಾರೆ.
ಜನವರಿ 19ರಂದು ಜಸಿಂಡ ಅರ್ಡರ್ನ್, ಪ್ರಧಾನಿ ಹುದ್ದೆಗೆ ದಿಢೀರ್ ರಾಜೀನಾಮೆ ನೀಡಿದ್ದರು. ಬಳಿಕ ನ್ಯೂಜಿಲೆಂಡ್‌ನ 41ನೇ ಪ್ರಧಾನಿಯಾಗಿ ಕ್ರಿಸ್ ಹಿಪ್ಕಿನ್ಸ್ ಆಯ್ಕೆಯಾದರು.
44 ವರ್ಷದ ಹಿಪ್ಕಿನ್ಸ್ ಅವರಿಗೆ ನ್ಯೂಜಿಲೆಂಡ್‌ನ ಗವರ್ನರ್-ಜನರಲ್ ಸಿಂಡಿ ಕಿರೊ, ಪ್ರಮಾಣ ವಚನ ಬೋಧಿಸಿದರು.