ನ್ಯೂಯಾರ್ಕ್: ಅಂಗಡಿಗಳಿಂದ ದಿನಸಿ ವಸ್ತುಗಳನ್ನು ಖರೀದಿಸುವಾಗ ಅಥವಾ ಎಟಿಎಂಗಳಿಂದ ಹಣವನ್ನು ತೆಗೆದುಕೊಳ್ಳುವಾಗ ಪಡೆಯವ ರಶೀದಿಗಳು ನಿಮಗೆ ಹಾನಿಯುಂಟು ಮಾಡಬಹುದು ಎಂದು ಎಂದು ಅಧ್ಯಯನಗಳು ತಿಳಿಸಿವೆ. ಇಂತಹ ರಶೀದಿ ನಮ್ಮ ದೇಹದಲ್ಲಿ ಹಾರ್ಮೋನ್ ಗಳಿಗೆ ತೊಂದರೆ ಉಂಟುಮಾಡುವ ರಾಸಾಯನಿಕ ಹೊಂದಿರುತ್ತವೆ ಎಂದು ವರದಿ ಹೇಳಿದೆ.
ಅಮೆರಿಕದ ಪರಿಸರ ವಿಜ್ಞಾನ ಕೇಂದ್ರದ ಪ್ರಕಾರ, ಈ ರಶೀದಿಗಳು ಬಿಸ್ಫೆನಾಲ್ (bisphenols) ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿದ್ದು, ಮಾನವರಲ್ಲಿ ಸಂತಾನೋತ್ಪತ್ತಿ ಸಂಬಂಧಿಸಿದ ಆರೋಗ್ಯ ತೊಂದರೆಗೆ ಕಾರಣವಾಗಲಿದೆ. ಈ ವರದಿ ಅಧ್ಯಯನಕ್ಕಾಗಿ ತಂಡ 144 ಪ್ರಮುಖ ಸರಣಿ ಅಂಗಡಿಗಳಿಂದ 374 ರಶೀದಿಗಳನ್ನು ಪರೀಕ್ಷಿಸಿದೆ. ಕಿರಾಣಿ ಅಂಗಡಿಗಳು, ರೆಸ್ಟೋರೆಂಟ್‌ಗಳು, ಡಿಪಾರ್ಟ್‌ಮೆಂಟ್ ಸ್ಟೋರ್‌ಗಳು, ಔಷಧಿ ಅಂಗಡಿಗಳು ಮತ್ತು ಗ್ಯಾಸ್ ಸ್ಟೇಷನ್‌ಗಳಿಂದ ಸಂಗ್ರಹಿಸಿದ ರಶೀದಿಗಳಿಂದ ಈ ಸಂಶೋಧನೆ ಮಾಡಲಾಗಿದೆ. ಶೇ 80 ಪ್ರತಿಶತ ರಸೀದಿಗಳಲ್ಲಿ ಬಿಸ್ಫೆನಾಲ್ (BPS ಅಥವಾ BPA) ಇರುವುದನ್ನು ಅವರು ಕಂಡುಕೊಂಡಿದ್ದಾರೆ.
“ರಶೀದಿಗಳಲ್ಲಿರುವ ಬಿಸ್ಪೆನಾಲ್ ಅಂಶ ಚರ್ಮದ ಮೂಲಕ ಸುಲಭವಾಗಿ ದೇಹ ಹೊಕ್ಕುತ್ತದೆ ಎಂದು ಮಿಚಿಗನ್‌ನ ಪರಿಸರ ವಿಜ್ಞಾನ ಕೇಂದ್ರದ ಪರಿಸರ ಆರೋಗ್ಯ ವಕೀಲರಾದ ಮೆಲಿಸ್ಸಾ ಕೂಪರ್ ಸಾರ್ಜೆಂಟ್ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ “ನಾನ್-ಟಾಕ್ಸಿಕ್ ಪೇಪರ್ ಬದಲಾವಣೆಯಾಗುವುದು ಅಗತ್ಯ. ಚಿಲ್ಲರೆ ವ್ಯಾಪಾರಿಗಳು ತಮ್ಮ ಗ್ರಾಹಕರಿಗೆ ರಾಸಾಯನಿಕ ಲೇಪಿತ ಕಾಗದವನ್ನು ಹಸ್ತಾಂತರಿಸುವುದನ್ನುನಾವು ಒತ್ತಾಯಿಸುತ್ತೇವೆ” ಎಂದು ಅವರು ಹೇಳಿದರು.