News Karnataka Kannada
Tuesday, April 23 2024
Cricket
ವಿದೇಶ

ಪೊಲೀಸರಿಗೆ ತಲೆನೋವು ತಂದ 33,000 ಅಂಗಡಿ ಕಳ್ಳತನ ಪ್ರಕರಣ

33,000 shop theft cases
Photo Credit : IANS

ಲಂಡನ್: ಯುನೈಟೆಡ್‌ ಕಿಂಗ್‌ಡಮ್‌ನ ಸೂಪರ್‌ ಮಾರ್ಕೆಟ್‌ಗಳಲ್ಲಿ ಚೀಸ್‌, ಸ್ಟೀಕ್‌ (ಮಾಂಸದ ಎಳೆಗಳು) ಮತ್ತು ಕಾಫಿ ಪುಡಿಯ ಜಾರ್‌ಗಳ ಕಳ್ಳತನ ಪ್ರಕರಣ ಗಣನೀಯವಾಗಿ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಪ್ರತಿ ವಸ್ತುವಿನ ಮೇಲೆ ಭದ್ರತಾ ಟ್ಯಾಗ್‌ಗಳನ್ನು ಅಳವಡಿಸುತ್ತಿವೆ. ಅಲ್ಲದೆ ಕಾಫಿಪುಡಿ ಡಬ್ಬವನ್ನು ಇಡುವ ಬದಲಿಗೆ ಪ್ರದರ್ಶನ ಸ್ಥಳದಲ್ಲಿ ಡಮ್ಮಿ ಜಾರ್‌ಗಳು ಇರಿಸುತ್ತಿವೆ.

ಮಾರ್ಚ್‌ನಲ್ಲಿ ಇಂಗ್ಲೆಂಡ್, ವೇಲ್ಸ್ ಮತ್ತು ಉತ್ತರ ಐರ್ಲೆಂಡ್‌ನಲ್ಲಿ ಪೊಲೀಸ್ ಪಡೆಗಳು ಸುಮಾರು 33,000 ಅಂಗಡಿ ಕಳ್ಳತನದ ಘಟನೆಗಳನ್ನು ದಾಖಲಿಸಿವೆ ಎಂದು ಬಿಬಿಸಿ ವಿಶ್ಲೇಷಿಸಿದೆ. ಕಳೆದ ವರ್ಷದ ಮಾರ್ಚ್‌ಗೆ ಹೋಲಿಸಿದರೆ 30.9 ಶೇಕಡಾ ಹೆಚ್ಚಳವಾಗಿದೆ. ಸುಮಾರು 45 ವರ್ಷಗಳಲ್ಲಿ ಆಹಾರದ ಬೆಲೆಗಳಲ್ಲಿ ಗಣನೀಯವಾಗಿ ಏರಿಕೆಯಾಗಿದ್ದು, ಹೀಗಾಗಿ ಜನರು ಕಳ್ಳತನ ಮೊರೆಹೋಗಿದ್ದಾರೆ ಎನ್ನಲಾಗಿದೆ.

ಸಕ್ಕರೆ, ಹಾಲು ಮತ್ತು ಪಾಸ್ಟಾದಂತಹ ಪ್ರಧಾನ ಪದಾರ್ಥಗಳ ಬೆಲೆಗಳಲ್ಲಿ ತೀವ್ರ ಏರಿಕೆಯಾಗಿದೆ ಎಂದು ಅಂಕಿ ಅಂಶಗಳು ಹೇಳಿವೆ. ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಫೋಟೋಗಳು ವಿವಿಧ ಸೂಪರ್‌ಮಾರ್ಕೆಟ್‌ಗಳಲ್ಲಿ ಅಂಗಡಿ ಕಳ್ಳತನ ತಪ್ಪಿಸಲು ವಿವಿಧ ಕ್ರಮಗಳ ಮೊರೆಹೋಗಿರುವುದು ದಾಖಲಾಗಿದೆ.

ಸೂಪರ್‌ ಮಾರ್ಕೆಟ್‌ಗಳಲ್ಲಿ ಶೆಲ್ಫ್‌ಗಳಲ್ಲಿ ಡಮ್ಮಿ ಕಾಫಿ ಜಾರ್‌ಗಳ ಚಿತ್ರವನ್ನು ಜಾಲತಾಣ ಬಳಕೆದಾರರು ಪೋಸ್ಟ್ ಮಾಡಿದ್ದಾರೆ, ಗ್ರಾಹಕರು ನೈಜ ಕಾಫಿ ಪುಡಿಯನ್ನು ಖರೀದಿಸಲು ಕೌಂಟರ್‌ನಲ್ಲಿ ಕೇಳಬೇಕಿದೆ ಎಂದು ಅವರು ವಿವರಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು