News Kannada
Monday, December 11 2023
ವಿದೇಶ

ಮೆಕ್ಸಿಕೋದಲ್ಲಿ ಟ್ರಕ್ ಪಲ್ಟಿಯಾಗಿ 10 ಜನ ಸಾವು

At least 10 killed as truck overturns in Mexico
Photo Credit : News Kannada

ಚಿಯಾಪಾಸ್: ಸರಕು ಸಾಗಣೆ ಟ್ರಕ್ ಅಪಘಾತಕ್ಕೀಡಾಗಿ 10 ಕ್ಯೂಬನ್ ವಲಸಿಗರು ಸಾವನ್ನಪ್ಪಿದ್ದು, 17 ಜನರಿಗೆ ಗಂಭೀರ ಗಾಯಗಳಾಗಿರುವ ಘಟನೆ ದಕ್ಷಿಣ ಮೆಕ್ಸಿಕನ್ ರಾಜ್ಯವಾದ ಚಿಯಾಪಾಸ್‌ಯಲ್ಲಿ ನಡೆದಿದೆ. ಚಿಯಾಪಾಸ್‌ನಲ್ಲಿನ ಪಿಜಿಜಿಯಾಪಾನ್-ಟೋನಾಲಾ ಹೆದ್ದಾರಿಯ ಪೆಸಿಫಿಕ್ ಕರಾವಳಿಯಲ್ಲಿ ಈ ಅಪಘಾತ ಸಂಭವಿಸಿದೆ.

ಗ್ವಾಟೆಮಾಲಾದಿಂದ ಮೆಕ್ಸಿಕೊಕ್ಕೆ ಉತ್ತರಕ್ಕೆ ಯುನೈಟೆಡ್ ಸ್ಟೇಟ್ಸ್ ಕಡೆಗೆ ಹೋಗುವ ಮಾರ್ಗದಲ್ಲಿ ವಲಸಿಗರು ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದೆ.

ಇನ್ನು ಅಪಘಾತ ಮಾಡಿದ ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ವರದಿಗಳ ಪ್ರಕಾರ ಈ ಟ್ರಕ್​​ ಚಾಲಕ ವೇಗವಾಗಿ ಬಂದ ಕಾರಣ ಈ ಅಪಘಾತ ನಡೆದಿದೆ ಎಂದು ಹೇಳಲಾಗಿದೆ. ನಂತರ ಟ್ರಕ್​​ ಮರಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

See also  ಬೇಲೂರು: ಪರಿಸರ ಜಾಗೃತಿಗೆ 50 ಸಾವಿರ ಕಿ.ಮೀ. ಸೈಕಲ್ ಜಾಥಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು