ಮಾಸ್ಕೋ: ರಷ್ಯಾದ ಎರಡು ಪ್ರದೇಶಗಳಲ್ಲಿ ಸೈಡರ್ ಎಂಬ ಮದ್ಯ ಕುಡಿದು ಕನಿಷ್ಠ 18 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಉಲಿಯಾನೋವ್ಸ್ಕ್ ಪ್ರದೇಶದಲ್ಲಿ 16 ಜನರು ಮತ್ತು ಸಮರಾ ಪ್ರದೇಶದಲ್ಲಿ ಇಬ್ಬರು ಮಿಸ್ಟರ್ ಸೈಡರ್-ಬ್ರಾಂಡ್ ಆಲ್ಕೋಹಾಲ್ ಕುಡಿದು ಸಾವನ್ನಪ್ಪಿದ್ದಾರೆ.
ಅಲ್ಲದೆ ಉಡ್ಮುರ್ಟಿಯಾದಲ್ಲಿ ಇಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಸಮಾರಾ ಪ್ರದೇಶದ ಕಾರ್ಖಾನೆಯಲ್ಲಿ ಪಾನೀಯವನ್ನು ತಯಾರಿಸಲಾಗಿತ್ತು, ಸೈಡರ್ನಲ್ಲಿ ಯಾವ ವಸ್ತುವು ವಿಷಕ್ಕೆ ಕಾರಣವಾಯಿತು ಎಂಬುದನ್ನು ಅಧಿಕಾರಿಗಳು ನಿರ್ದಿಷ್ಟಪಡಿಸಿಲ್ಲ.
ರಷ್ಯಾದ ಗ್ರಾಹಕ ಹಕ್ಕುಗಳು ಮತ್ತು ಮಾನವ ಯೋಗಕ್ಷೇಮದ ವಾಚ್ಡಾಗ್ ರೋಸ್ಪೊಟ್ರೆಬ್ನಾಡ್ಜೋರ್ನ ಮುಖ್ಯಸ್ಥ ಅನ್ನಾ ಪೊಪೊವಾ ಅಂತಹ ಉತ್ಪನ್ನಗಳನ್ನು ಹಿಂತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಪೊಲೀಸರು ಸೈಡರ್ ಉತ್ಪಾದಕ ಕಂಪನಿ ಮುಖ್ಯಸ್ಥರನ್ನು ವಶಕ್ಕೆ ಪಡೆದಿದ್ದಾರೆ.