ಗಾಜಾ, ಮೇ.12: ಇಸ್ರೇಲ್ ಮೇಲೆ ಪ್ಯಾಲೇಸ್ತೆನಿ ಪಡೆಗಳು ನಡೆಸಿದ ರಾಕೆಟ್ ದಾಳಿಗೆ ಪ್ರತಿಯಾಗಿ ಇಸ್ರೇಲಿ ಯುದ್ಧ ವಿಮಾನಗಳು ಸತತ ಮೂರನೇ ದಿನವೂ ಗಾಜಾ ಪಟ್ಟಿಯ ಮೇಲೆ ತೀವ್ರವಾದ ವೈಮಾನಿಕ ದಾಳಿಯನ್ನು ಮುಂದುವರೆಸಿದ್ದು, 28 ಪ್ಯಾಲೆಸ್ಟೀನಿಯಾದವರು ಸಾವನ್ನಪ್ಪಿದ್ದಾರೆ ಮತ್ತು 93 ಮಂದಿ ಗಾಯಗೊಂಡಿದ್ದಾರೆ.
ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಇದುವರೆಗೆ 93 ಮಂದಿ ಗಾಯಗೊಂಡಿದ್ದಾರೆ ಎಂದು ಗಾಜಾದಲ್ಲಿರುವ ಪ್ಯಾಲೇಸ್ಟಿನಿಯನ್ ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ದೃಢಪಡಿಸಿದೆ.
ಪ್ಯಾಲೇಸ್ಟಿನಿಯನ್ ಇಸ್ಲಾಮಿಕ್ ಜಿಹಾದ್ ಮತ್ತು ಇಸ್ಲಾಮಿಕ್ ರೆಸಿಸ್ಟೆನ್ಸ್ ಮೂವ್ಮೆಂಟ್ (ಹಮಾಸ್) ಸೇರಿದಂಪ್ಯಾಲೇಸ್ಟಿನಿಯನ್ ಬಣ ಮತ್ತು ಇಸ್ರೇಲಿ ಪಡೆಗಳ ನಡುವೆ ಕಾಳಗ ನಡೆದಿದೆ.
ಪ್ಯಾಲೇಸ್ಟಿನಿಯನ್ ಮೂಲಗಳ ಪ್ರಕಾರ, ಈಜಿಪ್ಟ್, ಕತಾರ್ ಮತ್ತು ಯುಎನ್ ಇಸ್ರೇಲ್ ಮತ್ತು ಪಿಐಜೆ ಸೇರಿದಂತೆ ಹಲವು ದೇಶಗಳು ಕದನ ವಿರಾಮಕ್ಕೆ ಪ್ರಯತ್ನಿಸುತ್ತಿವೆ.