ಬಾಗ್ದಾದ್: ವೈರಲ್ ಹೆಮರಾಜಿಕ್ ಜ್ವರದಿಂದ (ವಿಎಚ್ಎಫ್) ಜನವರಿಯಿಂದ ಇದುವರೆಗೆ 18 ಸಾವು ಸಂಭವಿಸಿದೆ ಎಂದು ಇರಾಕ್ ಆರೋಗ್ಯ ಸಚಿವಾಲಯ ತಿಳಿಸಿದೆ. 35 ಪ್ರಕರಣಗಳು ದಕ್ಷಿಣ ಧಿ ಕರ್ ಪ್ರಾಂತ್ಯದಲ್ಲಿ ದಾಖಲಾಗಿವೆ. 18 ಪ್ರಕರಣಗಳು ಇತರ ಪ್ರಾಂತ್ಯಗಳಲ್ಲಿ ದಾಖಲಾಗಿವೆ ಎಂದು ಸಚಿವಾಲಯದ ವಕ್ತಾರ ಸಯ್ಫ್ ಅಲ್-ಬದರ್ ಗುರುವಾರ ಅಧಿಕೃತ ಇರಾಕಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ವಿಎಚ್ಎಫ್ ಎನ್ನುವುದು ಎಬೋಲಾ ಸೇರಿದಂತೆ ವಿವಿಧ ವೈರಸ್ಗಳಿಂದ ಉಂಟಾಗುವ ರೋಗ ಇದಾಗಿದೆ. ಇದು ದೇಹದಲ್ಲಿನ ಅನೇಕ ಅಂಗ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರುತ್ತದೆ. ಜ್ವರ ಮತ್ತು ರಕ್ತಸ್ರಾವಕ್ಕೆ ಕಾರಣವಾಗಬಹುದು. ಇತ್ತೀಚಿನ ಪ್ರಕರಣಗಳಿಗೆ ಯಾವ ವೈರಸ್ ಕಾರಣವಾಯಿತು ಎಂಬುದನ್ನು ಇರಾಕಿನ ಆರೋಗ್ಯ ಸಚಿವಾಲಯ ಬಹಿರಂಗಪಡಿಸಿಲ್ಲ.