News Kannada
Friday, March 01 2024
ವಿದೇಶ

ಶ್ರೀಲಂಕಾ: ನೂತನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ದಿನೇಶ್ ಗುಣವರ್ಧನಾ

Dinesh Gunavardhana takes over as Sri Lanka's new Prime Minister amid economic crisis
Photo Credit : Wikimedia

ಶ್ರೀಲಂಕಾ: ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟುಗಳ ನಡುವೆ ನೂತನ ಅಧ್ಯಕ್ಷರಾಗಿ ರಾನಿಲ್‌ ವಿಕ್ರಮ ಸಿಂಘೇ ಅಧಿಕಾರ ವಹಿಸಿಕೊಂಡಿದ್ದಾರೆ. ಅವರ ಬೆನ್ನಲ್ಲೇ ಸರ್ಕಾರದ ಇತರ ಜವಾಬ್ದಾರಿಯುತ ಸ್ಥಾನಗಳಿಗೆ ಇತರರನ್ನು ಆಯ್ಕೆ ಮಾಡಲಾಗಿದ್ದು ಲಂಕೆಯ ನೂತನ ಪ್ರಧಾನಿಯಾಗಿ ದಿನೇಶ ಗುಣವರ್ಧನಾ ಅಧಿಕಾರವಹಿಸಿಕೊಂಡಿದ್ದಾರೆ.

ಎಪ್ಪತ್ತೆರಡು ವರ್ಷದ ದಿನೇಶ್ ಗುಣವರ್ಧನಾ ಸಂಸತ್ತಿನ ಸಭಾನಾಯಕರಾಗಿ, ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅವರು ಈ ಹಿಂದಿನ ಗೋತಬಯ-ಮಹಿಂದ ಸರ್ಕಾರದಲ್ಲಿ ವಿದೇಶಾಂಗ ವ್ಯವಹಾರ ಮತ್ತು ಶಿಕ್ಷಣ ಸಚಿವರಾಗಿದ್ದರು. ಅವರ ಸರಳತೆಯನ್ನು ಶ್ರೀಲಂಕಾದ ಜನರು ನೆಚ್ಚಿಕೊಂಡಿದ್ದರು.

ಉಚ್ಛಾಟಿತ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರ ನಿಕಟವರ್ತಿಯಾಗಿರುವ ಗುಣವರ್ಧನಾ ಅವರು 2015 ಮತ್ತು 2019 ರ ನಡುವೆ ಮೈತ್ರಿಪಾಲ ಸಿರಿಸೇನಾ ಮತ್ತು ವಿಕ್ರಮಸಿಂಘೆ ಅವರ ಆಡಳಿತದಲ್ಲಿ ವಿರೋಧ ಪಕ್ಷದಲ್ಲಿ ಕೂತು ಛಾಪು ಮೂಡಿಸಿದ್ದರು.

ಯುನೈಟೆಡ್ ಸ್ಟೇಟ್ಸ್ ಮತ್ತು ನೆದರ್ಲ್ಯಾಂಡ್ಸ್ನಲ್ಲಿ ಶಿಕ್ಷಣ ಪಡೆದ ದಿನೇಶ್ ಗುಣವರ್ಧನಾ ಅವರು ಟ್ರೇಡ್ ಯೂನಿಯನ್ ನಾಯಕರಾಗಿದ್ದಾರೆ ಮತ್ತು ಶ್ರೀಲಂಕಾದಲ್ಲಿ ಸಮಾಜವಾದದ ಪಿತಾಮಹ ಎಂದು ಕರೆಯಲ್ಪಡುವ ಅವರ ತಂದೆ ಫಿಲಿಪ್ ಗುಣವರ್ಧನ ಅವರಂತೆ ಹೋರಾಟದ ಹಿನ್ನೆಲಯನ್ನೂ ಹೊಂದಿದವರಾಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು