News Kannada
Friday, March 01 2024
ವಿದೇಶ

ಪಾಕಿಸ್ತಾನ: ಪತ್ನಿಯನ್ನು ಹತ್ಯೆ ಮಾಡಿ ಕಡಾಯಿಯಲ್ಲಿ ಬೇಯಿಸಿದ ಪತಿ

17-year-old girl found murdered in field
Photo Credit :

ಇಸ್ಲಾಮಾಬಾದ್: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ  ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಆರು ಮಕ್ಕಳ ಮುಂದೆಯೇ ಹತ್ಯೆ ಮಾಡಿ, ಮೃತದೇಹವನ್ನು ಕಡಾಯಿಯಲ್ಲಿ ಬೇಯಿಸಿದ ಈ ಘಟನೆ ನಡೆದಿದೆ.

ಮೃತ ಮಹಿಳೆಯನ್ನು ನರ್ಗೀಸ್ ಎಂದು ಗುರುತಿಸಲಾಗಿದ್ದು, ನಗರದ ಗುಲ್ಶನ್-ಎ-ಇಕ್ಬಾಲ್ ಪ್ರದೇಶದ ಖಾಸಗಿ ಶಾಲೆಯ ಅಡುಗೆ ಕೋಣೆಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ.  ಆರೋಪಿ ಪತಿ ‘ಆಶಿಕ್’ ಬಜಾರ್ ಎಜೆನ್ಸಿಯ ಶಾಲೆಯಲ್ಲಿ ವಾಚ್‍ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಬಳಿಕ ಆರೋಪಿ ತನ್ನ ಮೂವರು ಮಕ್ಕಳಗಳ ಜೊತೆ ಪರಾರಿಯಾಗಿದ್ದು, ಆತನ 15 ವರ್ಷದ ಪುತ್ರಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾಳೆ. ಇದೀಗ ಮೂವರು ಮಕ್ಕಳನ್ನು ಪಾಲನೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಪೂರ್ವ ಹಿರಿಯ ಪೊಲೀಸ್ ಅಧೀಕ್ಷಕ (ಎಸ್‍ಎಸ್‍ಪಿ) ಅಬ್ದುರ್ ರಹೀಮ್ ಶೆರಾಜಿ ಮಾಹಿತಿ ನೀಡಿದ್ದಾರೆ.

ಆರೋಪಿ ಮೊದಲು ಪತ್ನಿಯನ್ನು ದಿಂಬಿನಿಂದ ಮೂಗು, ಬಾಯಿಯನ್ನು ಅಮುಕಿ ಕೊಲೆ ಮಾಡಿದ್ದಾನೆ. ನಂತರ ಮಕ್ಕಳ ಮುಂದೆಯೇ ಕಡಾಯಿಯಲ್ಲಿ ಬೇಯಿಸಿದ್ದಾನೆ. ಅಲ್ಲದೇ ಮಹಿಳೆಯ ಒಂದು ಕಾಲು ಕೂಡ ದೇಹದಿಂದ ಬೇರ್ಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು