ಕೆನಡಾ: ಭಾರತ ಮತ್ತು ಕೆನಡಾ ಮಧ್ಯೆ ಸಂಬಂಧಕ್ಕೆ ಹಿನ್ನಡೆ ಬರುತ್ತಿರುವ ಹೊತ್ತಿನಲ್ಲೇ ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಖಲಿಸ್ತಾನೀಗಳು ಕೆನಡಾ ನೆಲದಲ್ಲಿ ಉಗ್ರ ನಿಲುವು ಮುಂದುವರಿಸಿದ್ದಾರೆ. ಕೆನಡಾದ ಸರೇ ನಗರದ ಗುರುದ್ವಾರವೊಂದರಲ್ಲಿ ಅಂಟಿಸಲಾದ ಪೋಸ್ಟರ್ಗಳು ಕೆನಡಾ ಅಧಿಕಾರಿಗಳನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿವೆ.
ಮೂವರು ಭಾರತೀಯ ರಾಜತಾಂತ್ರಿಕ ಅಧಿಕಾರಿಗಳನ್ನು ಕೊಲ್ಲುವಂತೆ ಈ ಪೋಸ್ಟರ್ಗಳಲ್ಲಿ ಕರೆ ನೀಡಲಾಗಿತ್ತು. ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ಸರೇ ನಗರದ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಈ ಪೋಸ್ಟರ್ಗಳನ್ನು ತೆಗೆಯುವಂತೆ ಗುರುದ್ವಾರಕ್ಕೆ ಆದೇಶಿಸಿದ್ದಾರೆ.
ಹಾಗೆಯೇ, ಧ್ವನಿವರ್ಧಕ ಬಳಸಿ ಯಾವುದೇ ಉಗ್ರತ್ವದ ಪ್ರಕಟಣೆಗಳನ್ನು ಮಾಡದಂತೆಯೂ ಸೂಚಿಸಿದ್ದಾರೆ ಎಂದು ಮೂಲಗಳು ವರದಿ ಮಾಡಿದೆ.