News Kannada
Monday, March 04 2024
ವಿದೇಶ

ಲಂಡನ್: ಬ್ರಿಟನ್​ ಪ್ರಧಾನಿಯಾಗಿ ಭಾರತ ಮೂಲದ ರಿಷಿ ಸುನಕ್​ ಆಯ್ಕೆ

Rishi Sunak elected uk's prime minister
Photo Credit : Twitter

ಲಂಡನ್, ಅ.24: ಬ್ರಿಟನ್​ ಪ್ರಧಾನಿಯಾಗಿ ಇನ್ಫೋಸಿಸ್​ ಸಹ ಸಂಸ್ಥಾಪಕ ಎನ್​.ಆರ್​. ನಾರಾಯಣ ಮೂರ್ತಿ ಅವರ ಅಳಿಯ, ಭಾರತ ಮೂಲದ ರಿಷಿ ಸುನಕ್​ ಅವರು ಆಯ್ಕೆಯಾಗಿದ್ದಾರೆ.

ಪ್ರತಿಸ್ಪರ್ಧಿ ಪೆನ್ನಿ ಮೊರ್ಡಾಂಟ್ ಅವರು ಚುನಾವಣಾ ಕಣದಿಂದ ಹಿಂದೆ ಸರಿದ ಹಿನ್ನೆಲೆ, ಎದುರಾಳಿ ಯಾರೂ ಇಲ್ಲದೇ ಇರುವುದರಿಂದ ಸುನಕ್​ಗೆ ಪ್ರಧಾನಿ ಪಟ್ಟ ಒಲಿಯಿತು. ಬಿಟ್ರನ್​ ಪ್ರಧಾನಿಯಾಗಿ ಆಯ್ಕೆಯಾಗಲು 100 ಸದಸ್ಯರ ಬೆಂಬಲದ ಅಗತ್ಯವಿತ್ತು. ಆದರೆ, ರಿಷಿ ಸುನಕ್​ ಅವರಿಗೆ 193 ಸದಸ್ಯರ ಬೆಂಬಲ ಸಿಕ್ಕಿದೆ. ಮೊದಲ ಪ್ರಯತ್ನದಲ್ಲಿ ಲೀಸ್​ ಟ್ರಸ್​ ವಿರುದ್ಧ ಅಂತಿಮ ಹಂತದಲ್ಲಿ ಸೋಲು ಅನುಭವಿಸಿದ್ದ ರಿಷಿಗೆ, 2ನೇ ಹಂತದಲ್ಲಿ ಬ್ರಿಟನ್​ ಪ್ರಧಾನಿ ಹುದ್ದೆ ಒಲಿದು ಬಂದಿದೆ.

ರಿಷಿ ಸುನಕ್‌ ಅವರ ತಂದೆ ಯಶವೀರ್‌ ಹಾಗೂ ತಾಯಿ ಉಷಾ ಸುನಕ್ ಭಾರತ ಮೂಲದವರಾಗಿದ್ದು, ಇವರು 1960ರಲ್ಲಿ ಪೂರ್ವ ಆಫ್ರಿಕಾದಿಂದ ಬ್ರಿಟನ್‌ಗೆ ತೆರಳಿ ಅಲ್ಲಿಯೇ ನೆಲೆಸಿದ್ದಾರೆ. ರಿಷಿ ಸುನಕ್‌ ಅವರು 1980ರಲ್ಲಿ ಜನಿಸಿದ್ದು, ರಾಜಕೀಯ ಪ್ರವೇಶಿಸುವ ಮುನ್ನ ಉದ್ಯಮಿ ಹಾಗೂ ಹೂಡಿಕೆಯಲ್ಲಿ ತೊಡಗಿದ್ದರು. ಯಾರ್ಕ್‌ಶೈರ್‌ ಕ್ಷೇತ್ರದಿಂದ 2015ರಲ್ಲಿ ಸಂಸದರಾಗಿ ಆಯ್ಕೆಯಾಗಿದ್ದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು