News Kannada
Sunday, March 03 2024
ವಿದೇಶ

ದಕ್ಷಿಣ ಕೊರಿಯಾದಲ್ಲಿ ಶಿಶು ಜನನ ಪ್ರಮಾಣ ಗಣನೀಯ ಕುಸಿತ

South Korea's infant birth rate drops by 6%
Photo Credit : By Author

ಸಿಯೋಲ್: ದಕ್ಷಿಣ ಕೊರಿಯಾದಲ್ಲಿ ಜನಿಸಿದ ಶಿಶುಗಳ ಸಂಖ್ಯೆ ಜನವರಿಯಲ್ಲಿ ಕನಿಷ್ಠ ಮಟ್ಟಕ್ಕೆ ಇಳಿದಿದೆ ಎಂಬುದು ಅಂಕಿಸಂಖ್ಯೆಗಳಿಂದ ತಿಳಿದುಬಂದಿದೆ.

ಅಂಕಿಅಂಶಗಳ ಪ್ರಕಾರ ಈ ವರ್ಷದ ಜನವರಿಯಲ್ಲಿ ಕೇವಲ 23,179 ಶಿಶುಗಳು ಜನಿಸಿದ್ದು, ಹಿಂದಿನ ವರ್ಷಕ್ಕಿಂತ ಶೇಕಡಾ 6 ರಷ್ಟು ಕುಸಿದಿದೆ.

1981 ರಲ್ಲಿ ಅಂಕಿಅಂಶಗಳ ಸಂಸ್ಥೆ ಮಾಸಿಕ ಡೇಟಾ ಸಂಗ್ರಹ ಆರಂಭಿಸಿದ ಬಳಿಕ ಜನವರಿಯ ಅಂಕಿಅಂಶ ಅತಿ ಕಡಿಮೆ ಪ್ರಮಾಣದ್ದಾಗಿದೆ. ದಕ್ಷಿಣ ಕೊರಿಯಾದಲ್ಲಿ ಜನಿಸುವ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ.

ಆರ್ಥಿಕ ಮಂದಗತಿ ಮತ್ತು ಮನೆಗಳ ಬಾಡಿಗೆ ದುಬಾರಿ, ವೆಚ್ಚ ಇತ್ಯಾದಿ ಕಾರಣಗಳಿಂದ ಜನರು ಹೆಚ್ಚು ಮಕ್ಕಳನ್ನು ಹೊಂದಲು ಇಷ್ಟಪಡುತ್ತಿಲ್ಲ ಎಂದು ತಿಳಿದುಬಂದಿದೆ.

ಕಳೆದ ವರ್ಷ ಒಟ್ಟು 249,000 ಶಿಶುಗಳು ಜನಿಸಿದ್ದವು. ದೇಶದಲ್ಲಿ ಮಹಿಳೆಯು ತನ್ನ ಜೀವಿತಾವಧಿಯಲ್ಲಿ ಹೆರುವ ಫಲವತ್ತತೆ ದರ 2022 ರಲ್ಲಿ 0.78 ಕ್ಕೆ ಇಳಿದಿದೆ. 1970 ರಿಂದ 4.53 ರಷ್ಟಿತ್ತು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು