ಇಸ್ಲಾಮಾಬಾದ್: ಸರಣಿ ಟ್ವೀಟ್ ಮಾಡುವ ಮೂಲಕ ಮಾತುಕತೆ ಮೂಲಕ ಗಡಿ ವಿವಾದ ಇತ್ಯರ್ಥಕ್ಕೆ ಪಾಕಿಸ್ತಾನ ಸಿದ್ಧ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಉತ್ತರಖಂಡ: ಫೆಬ್ರವರಿ 7ರಂದು ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಸಂಭವಿಸಿದ ಹಿಮಪಾತದಲ್ಲಿ ಮೃತಪಟ್ಟವರ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಮೃತರ ಸಂಖ್ಯೆಯು 72ಕ್ಕೆ ತಲುಪಿದೆ. ಜೋಶಿಮಠ ಬಳಿಯ ಮಾರ್ವಾಡಿಯಲ್ಲಿರುವ ಅಲಕಾನಂದ ದಂಡೆಯಲ್ಲಿ ಇನ್ನೊಂದು ಶವ ಪತ್ತೆಯಾಗಿದೆ.
ನವದೆಹಲಿ: ಹೊಸ ಹೊಸ ಕುತೂಹಲಕಾರಿ ವಿಚಾರಗಳನ್ನು ಹೊರಹಾಕುತ್ತಿರುವ ಮುಕೇಶ್ ಅಂಬಾನಿ ನಿವಾಸದ ಹತ್ತಿರ ಕಂಡುಬಂದ ಎಸ್ಯುವಿ ಪ್ರಕರಣ.
ಉತ್ತರಪ್ರದೇಶ : ದೇಶದಾದ್ಯಂತ ಕಳೆದ 44 ದಿನಗಳಿಂದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ನಡೆಯುತ್ತಿದ್ದ ದೇಣಿಗೆ ಸಂಗ್ರಹ ಅಭಿಯಾನ ನೆನ್ನೆಗೆ (ಫೆ.27) ಮುಕ್ತಾಯಗೊಂಡಿದೆ.
ವಾಷಿಂಗ್ಟನ್: ಜಗತ್ತಿಗೆ ದೊಡ್ಡಣ್ಣ ಎನಿಸಿಕೊಂಡ ಅಮೇರಿಕಾ ಈವರೆಗೂ ಸಾಲ ಕೊಟ್ಟಿದೆ ಅಥವಾ ಕೊಡುತ್ತಿದೆ ಎಂದು ಸುದ್ದಿ ಮಾಡುತ್ತಿತ್ತು. ಆದರೆ ಇದೀಗ ಅಮೆರಿಕಾದ ಸಾಲ ದಿನ ದಿನಕ್ಕೂ ಹೆಚ್ಚುತ್ತಿದೆ ಎಂದು ಆ ದೇಶದ ಶಾಸನ ಸಭೆಯ ಪ್ರಮುಖ ಸದಸ್ಯ ಅಲೆಕ್ಸ್ ಮೂನಿ ಅಲ್ಲಿನ ಸರ್ಕಾರವನ್ನು ಎಚ್ಚರಿಸಿದ್ದಾರೆ.
ಹೈದರಾಬಾದ್: ಕೋಳಿ ಕೊಟ್ಟವು ಕಾನೂನು ಬಾಹಿರವಾಗಿದ್ದರೂ ದೇಶ ದಹಲವೆಡೆ ಈಗಲೂ ಪ್ರಚಲಿತದಲ್ಲಿದೆ. ಕೋಳಿ ಕಟ್ಟದಲ್ಲಿ ಕೋಳಿಗಳ 2 ಕದಡಿ ಸಾಯುವುದು ಸಹಜ. ಆದರೆ ಇಲ್ಲೊಂದು ಕೊಳ್ಳಿ ಅದರ ಮಾಲೀಕನ ಪ್ರಾಣ ತೆಗೆದಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಇದರ ಫಲವಾಗಿ ಕೋಳಿ ಮತ್ತು ಕೋಳಿಪಡೆ ಆಯೋಜಕ ಜೈಲು ಕಂಬಿ ಎಣಿಸುವಂತಾಗಿದೆ.
ನವದೆಹಲಿ: ಅಂತರರಾಷ್ಟ್ರೀಯ ವಾಣಿಜ್ಯ ವಿಮಾನ ಸಂಚಾರದ ಮೇಲಿನ ನಿರ್ಬಂಧವನ್ನು ವಿಸ್ತರಿಸಲಾಗಿದೆ. ಮಾರ್ಚ್ 31ರವರೆಗೂ ನಿರ್ಬಂಧ ವಿಸ್ತರಿಸಿರುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.
ನವದೆಹಲಿ: 'ಲೈಂಗಿಕ ಕಿರುಕುಳದ ಪ್ರಕರಣಗಳನ್ನು ಯಾವುದೇ ರೀತಿಯಲ್ಲೂ ಮುಚ್ಚಿಡಲು ಸಾಧ್ಯವಾಗದು' ಎಂದು ಜಿಲ್ಲಾ ನಿವೃತ್ತ ನ್ಯಾಯಾಧೀಶರ ವಿರುದ್ಧ ಮಧ್ಯಪ್ರದೇಶ ಹೈಕೋರ್ಟ್ ಜಾರಿಗೊಳಿಸಿರುವ ಆಂತರಿಕ ಇಲಾಖಾ ತನಿಖೆಯನ್ನು ರದ್ದುಗೊಳಿಸಲು ಕೋರಿ ಸಲ್ಲಿಸಿದ್ದ ಮನವಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಅಭಿಪ್ರಾಯವನ್ನು ನೀಡಿದೆ.
ನವದೆಹಲಿ : ನಮ್ಮ ಸಂಸ್ಕೃತಿಯ ಪ್ರತಿರೂಪದಂತಿರುವ ಕರ್ನಾಟಕದ ರಾಮನಗರ ಜಿಲ್ಲೆಯ ಚನ್ನಪಟ್ಟಣದ ಆಟಿಕೆ ಕ್ಲಸ್ಟರ್ ನಮ್ಮ ದೇಶಕ್ಕೆ ಮಾತ್ರ ಸೀಮಿತಗೊಳ್ಳಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ .
ಆಂಧ್ರಪ್ರದೇಶ: ಹಿರಿಯ ಮಗಳಿಗೆ ಚಿಕಿತ್ಸೆ ನೀಡುವ ಸಲುವಾಗಿ ಕಿರಿಯ ಮಗಳನ್ನು ಹತ್ತು ಸಾವಿರಕ್ಕೆ ಮಾರಾಟ ಮಾಡಿದ ಹೆತ್ತವರು. ಮನೆಯ ಕಷ್ಟ ನಿಭಾಯಿಸಲು ಹಾಗೂ ತಮ್ಮ ಹಿರಿಯ ಮಗಳಿಗಿರುವ ಉಸಿರಾಟದ ಸಮಸ್ಯೆಯನ್ನು ಹೋಗಲಾಡಿಸುವ ಸಲುವಾಗಿ 12ವರ್ಷದ ಕಿರಿಯ ಮಗಳನ್ನು 10 ಸಾವಿರಕ್ಕೆ ಮಾರಾಟ ಮಾಡಿರುವ ಹೃದಯವಿದ್ರಾವಕ ಘಟನೆ ಆಂಧ್ರಪ್ರದೇಶದ ನೆಲ್ಲೂರ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.