ಕೊರೋನಾ ಅಪ್ಡೇಟ್; 24 ಗಂಟೆಯಲ್ಲಿ 13,742 ಮಂದಿಗೆ ಕೋವಿಡ್ ಸೋಂಕು, 104 ಮಂದಿ ಮೃತ
ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆ ಅವಧಿಯಲ್ಲಿ 13,742 ಮಂದಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ. 104 ಮಂದಿ ಮೃತಪಟ್ಟಿದ್ದು, 14,037 ಸೋಂಕಿತರು ಚೇತರಿಸಿಕೊಂಡಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.