ಮೊಸಳೆಯಂತೆ ತೋರುವ ಮೀನಿನ ಕಳೆಬರಹ ಪತ್ತೆ
ಸಿಂಗಾಪೂರ್: ಸಿಂಗಾಪೂರ್ನ ಮ್ಯಾಕ್ರಿಚ್ಚಿ ಜಲಾಶಯದ ದಡದಲ್ಲಿ ವಿಚಿತ್ರ ಜೀವಿಯ ಕಳೇಬರಹ ಪತ್ತೆಯಾಗಿದ್ದು, ಅಲ್ಲಿನ ಸ್ಥಳೀಯರು ಯಾವ ಪ್ರಾಣಿ ಎಂದು ಪತ್ತೆಹಚ್ಚಲು ಪರದಾಡಿದ ಪ್ರಸಂಗ ಜರುಗಿತು. ಅದು ನೋಡಲು ಥೇಟ್ ಮೊಸಳೆಯಂತೆ ಕಾಣುವ ಇತಿಹಾಸಪೂರ್ವದ ದೈತ್ಯಾಕಾರದ ಮೀನು ಸಿಂಗಾಪೂರ್ನ ಜಲಾಶಯವೊಂದರಲ್ಲಿ ಪತ್ತೆಯಾಗಿದ್ದು, ಸಾಗರ ರಹಸ್ಯದ ಕಿಡಿ ಹೊತ್ತಿಸಿದೆ.