News Karnataka Kannada
Monday, May 20 2024
ದೇಶ

ಭಾರತೀಯ ವಾಯುಪಡೆಯ ತರಬೇತಿ ವಿಮಾನ ಪತನ: ಓರ್ವ ಸಾವು

ಭಾರತೀಯ ವಾಯುಪಡೆಯ (ಐಎಎಫ್) ತರಬೇತಿ ವಿಮಾನವು ತೂಪ್ರಾನ್‌ನ ರಾವೆಲ್ಲಿ ಗ್ರಾಮದ ಹೊರವಲಯದಲ್ಲಿ ಸೋಮವಾರ ಬೆಳಗ್ಗೆ ಪತನಗೊಂಡಿದೆ. ವಿಮಾನದಲ್ಲಿ ಎಷ್ಟು ಮಂದಿ ಇದ್ದರು ಎಂಬುದು ತಕ್ಷಣಕ್ಕೆ ಖಚಿತವಾಗಿಲ್ಲ. ಅಪಘಾತದ ನಂತರ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಕೆಲವೇ ನಿಮಿಷಗಳಲ್ಲಿ ವಿಮಾನವು ಸುಟ್ಟು ಬೂದಿಯಾಗಿದೆ.
Photo Credit : News Kannada

ಮೇದಕ್: ಭಾರತೀಯ ವಾಯುಪಡೆಯ (ಐಎಎಫ್) ತರಬೇತಿ ವಿಮಾನವು ತೂಪ್ರಾನ್‌ನ ರಾವೆಲ್ಲಿ ಗ್ರಾಮದ ಹೊರವಲಯದಲ್ಲಿ ಸೋಮವಾರ ಬೆಳಗ್ಗೆ ಪತನಗೊಂಡಿದೆ. ವಿಮಾನದಲ್ಲಿ ಎಷ್ಟು ಮಂದಿ ಇದ್ದರು ಎಂಬುದು ತಕ್ಷಣಕ್ಕೆ ಖಚಿತವಾಗಿಲ್ಲ. ಅಪಘಾತದ ನಂತರ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಕೆಲವೇ ನಿಮಿಷಗಳಲ್ಲಿ ವಿಮಾನವು ಸುಟ್ಟು ಬೂದಿಯಾಗಿದೆ. ಆದರೆ ಇದರಲ್ಲಿದ್ದ  ಓರ್ವ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.

ಬೆಳಗ್ಗೆ 8 ಗಂಟೆ ಸುಮಾರಿಗೆ ಘಟನೆ ನಡೆದಿದೆ, ವಿಮಾನ ಪತನಗೊಂಡಾಗ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಇನ್ನು ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಐಎಎಫ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಪೈಲಟ್ ವಿಮಾನದಿಂದ ಹೊರಗೆ ಜಿಗಿದಿದ್ದಾರೆಯೇ ಎಂಬುದು ಪೊಲೀಸರಿಗೆ ಖಚಿತವಾಗಿಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು