ಚಳಿಗೆ ಸವಿಯಿರಿ ಬಿಸಿಬಿಸಿ ಮೊಟ್ಟೆ ಬಜ್ಜಿ

ಚಳಿಗೆ ಸವಿಯಿರಿ ಬಿಸಿಬಿಸಿ ಮೊಟ್ಟೆ ಬಜ್ಜಿ

LK   ¦    Jun 26, 2019 12:02:38 PM (IST)
ಚಳಿಗೆ ಸವಿಯಿರಿ ಬಿಸಿಬಿಸಿ ಮೊಟ್ಟೆ ಬಜ್ಜಿ

ಸಸ್ಯಹಾರಿಗಳು ಬಾಳೆಕಾಯಿ, ಆಲೂಗೆಡ್ಡೆ, ಹೀರೆಕಾಯಿ ಹೀಗೆ ವಿವಿಧ ತರಕಾರಿಗಳಿಂದ ಬಜ್ಜಿ ಮಾಡಿ ಬಿಸಿಬಿಸಿಯಾಗಿ ಸವಿಯುತ್ತಿರುತ್ತಾರೆ. ಆದೇ ರೀತಿ ಮಾಂಸಹಾರಿಗಳು ಮೊಟ್ಟೆಯಿಂದ ಬಿಸಿ ಬಿಸಿಯಾಗಿ ಬಜ್ಜಿ ಮಾಡಿಕೊಂಡು ಸವಿಯಬಹುದಾಗಿದೆ.

ಮೊಟ್ಟೆ ಬಜ್ಜಿಗೆ ಬೇಕಾಗುವ ಪದಾರ್ಥಗಳು

ಮೊಟ್ಟೆ- ಮೂರು

ಕಡಲೆಹಿಟ್ಟು- ಒಂದು ಬಟ್ಟಲು

ಉಪ್ಪು- ರುಚಿಗೆ ತಕ್ಕಷ್ಟು

ಅಡುಗೆ ಸೋಡಾ- ಚಿಟಿಕೆಯಷ್ಟು

ಕಾರದ ಪುಡಿ- ಅರ್ಧಚಮಚ

ಜೀರಿಗೆಪುಡಿ- ಒಂದು ಚಮಚ

ಇಂಗು- ಅರ್ಧ ಚಮಚ

ಗರಂಮಸಾಲೆ- ಒಂದು ಚಮಚ

ಮೊಟ್ಟೆ ಬಜ್ಜಿ ಮಾಡುವುದು ಹೇಗೆ?

ಮೊದಲಿಗೆ ಮೊಟ್ಟೆಯನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಬೇಕು. ಬಳಿಕ ತಣ್ಣಗಾದ ನಂತರ ಸಿಪ್ಪೆ ತೆಗೆದು ಎರಡು ಭಾಗವನ್ನಾಗಿ ಮಾಡಿಟ್ಟಕೊಳ್ಳಬೇಕು.

ಇನ್ನೊಂದೆಡೆ ಒಂದು ಪಾತ್ರೆಯಲ್ಲಿ ಕಡಲೆಹಿಟ್ಟು ಹಾಕಿ ಅದಕ್ಕೆ ಉಪ್ಪು, ಸೋಡಾ, ಖಾರದಪುಡಿ, ಜೀರಿಗೆ, ಇಂಗು ಸೇರಿದಂತೆ ಎಲ್ಲ ಮಸಾಲೆಗಳನ್ನು ಹಾಕಿ ಸ್ವಲ್ಪ ನೀರು ಹಾಕಿ ಚೆನ್ನಾಗಿ ಕಲೆಸಬೇಕು. ಅಗತ್ಯತೆ ನೋಡಿಕೊಂಡು ನೀರು ಹಾಕಿ ಬಜ್ಜಿ ಹಿಟ್ಟಿನಷ್ಟು ತೆಳು ಮಾಡಿಕೊಳ್ಳಬೇಕು.

ಆ ನಂತರ ಒಲೆಯಲ್ಲಿ ಬಾಣಲೆ ಇರಿಸಿ ಎಣ್ಣೆ ಹಾಕಿ ಅದು ಕಾದ ಬಳಿಕ ಮೊಟ್ಟೆಯನ್ನು ಕಡಲೆ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ ಎಣ್ಣೆಯಲ್ಲಿ ಕರಿದರೆ ಮೊಟ್ಟೆ ಬಜ್ಜಿ ರೆಡಿಯಾದಂತೆಯೇ.