ಮಳೆಗಾಲದ ಕರಾವಳಿ ಸ್ಪೆಷಲ್ ‘ಹಲಸಿನ ಹಣ್ಣಿನ ದೋಸೆ’

ಮಳೆಗಾಲದ ಕರಾವಳಿ ಸ್ಪೆಷಲ್ ‘ಹಲಸಿನ ಹಣ್ಣಿನ ದೋಸೆ’

YK   ¦    Jul 12, 2019 02:10:59 PM (IST)
ಮಳೆಗಾಲದ ಕರಾವಳಿ ಸ್ಪೆಷಲ್ ‘ಹಲಸಿನ ಹಣ್ಣಿನ ದೋಸೆ’

ಹಿಂದಿನ ಕಾಲದಲ್ಲಿ ಕರಾವಳಿ ಭಾಗದ ಜನರಿಗೆ ಮಳೆಗಾಲ ಬಂತೆಂದರೆ ಹಸಿರು ಸೌಂಧರ್ಯದ ಜತೆ ತಮ್ಮ ಆಹಾರ ಪದ್ಧತಿಯಲ್ಲೂ ಬದಲಾವಣೆಯಾಗುವ ಸಮಯ.

ಇಲ್ಲಿನ ಜನರು ಮಳೆಗಾಲದಲ್ಲಿ ತಮ್ಮ ಸುತ್ತಾ ಮುತ್ತಾ ಆಗುವ ನೈಸರ್ಗಿಕ ಸೊಪ್ಪು, ಹಲಸಿನ ಕಾಯಿಯನ್ನು ಬಳಸಿ ಆಹಾರವನ್ನು ತಯಾರಿಸುತ್ತಿದರು.ಅದು ಉತ್ತಮ ಆರೋಗ್ಯಕ್ಕೂ ಒಳ್ಳೆಯದಾಗಿದ್ದು, ತಿನ್ನಲು ರುಚಿಕರವಾಗಿರುತ್ತದೆ.

ಪ್ರಸ್ತುತ ಆ ಎಲ್ಲ ತಿಂಡಿ ತಿನಸುಗಳನ್ನು ಹಳ್ಳಿಗಳಲ್ಲಿ ಮಾತ್ರ ನಾವು ಸವಿಯಬಹುದು. ಮಂಗಳೂರಿನಲ್ಲಿ ಮಳೆಗಾಲದ ವಿಶೇಷ ಪದಾರ್ಥ ಹಾಗೂ ತಿಂಡಿಗಳು ಕೆಲವೊಂದು ಹೊಟೇಲ್ ಗಳಲ್ಲಿ ಸಿಗುತ್ತದೆ. ಕರಾವಳಿಯಲ್ಲಿ ಮಳೆಗಾಲದಲ್ಲಿ ಮಾಡುವ ತಿಂಡಿಗಳಲ್ಲಿ ಹಲಸಿನ ಹಣ್ಣಿನ ದೋಸೆ(ಗಾರ್ಯ) ಕೂಡ ಒಂದು. ಇದು ತಿನ್ನಲು ಬಲು ರುಚಿಕರವಾಗಿರುತ್ತದೆ.

ಇದನ್ನು ಮಾಡಲು ಬೇಕಾಗುವ ಪದಾರ್ಥಗಳು
ಒಂದು ಬೌಲ್ ಹಲಸಿನ ಹಣ್ಣು
ಒಂದು ಲೋಟ ಅಕ್ಕಿ
ರುಚಿಗೆ ತಕ್ಕ ಉಪ್ಪು
ಎಣ್ಣೆ


ಮಾಡುವ ವಿಧಾನ: ಬೇರೆ ಬೇರೆಯಾಗಿ ಅಕ್ಕಿ ಹಾಗೂ ಹಲಸಿನ ಹಣ್ಣನ್ನು ಚೆನ್ನಾಗ ರುಬ್ಬಿ. ನಂತರ ಎರಡು ಮಿಶ್ರಣವನ್ನು ಚೆನ್ನಾಗಿ ಕಲಸಿ 8 ರಿಂದ 9 ತಾಸು ಹಾಗೆಯೇ ಬಿಡಿ.
ಇದೀಗ ಮಿಶ್ರಣಕ್ಕೆ ಬೇಕಾದಷ್ಟು ಉಪ್ಪು ಹಾಕಿ ದೋಸೆ ಹಾಕಿ. ಇದು ತಿನ್ನಲು ತುಂಬಾನೇ ರುಚಿಕರವಾಗಿರುತ್ತದೆ.