ಸಿಂಪಲ್ ಆಗಿ ಮಾಡಿ ಈರುಳ್ಳಿ ಪಕೋಡ

ಸಿಂಪಲ್ ಆಗಿ ಮಾಡಿ ಈರುಳ್ಳಿ ಪಕೋಡ

YK   ¦    Aug 31, 2019 04:37:01 PM (IST)
ಸಿಂಪಲ್ ಆಗಿ ಮಾಡಿ ಈರುಳ್ಳಿ ಪಕೋಡ

ಸಂಜೆಯ ವೇಳೆ ಮನೆಯಲ್ಲಿಯೇ ಏನಾದರೂ ಬಿಸಿ ಬಿಸಿ ತಿನ್ನಬೇಕೆನಿಸುವವರು ಈರುಳ್ಳಿ ಪಕೋಡವನ್ನು ತಯಾರಿಸಬಹುದು. ತುಂಬಾ ಸುಲಭವಾಗಿ ರುಚಿಕರವಾಗಿ ಮಾಡಬಹುದು.

ಬೇಕಾಗುವ ಸಾಮಾಗ್ರಿಗಳು
ಈರುಳ್ಳಿ
ಕಡಲೆ ಹಿಟ್ಟು
ಅಕ್ಕಿ ಹಿಟ್ಟು
ಉಪ್ಪು
ಕರಿಯಲು ಎಣ್ಣೆ
ಜೀರಿಗೆ
ಮೆಣಸು
ಕೊತ್ತಂಬರಿ ಸೊಪ್ಪು
ನೀರು

ಮಾಡುವ ವಿಧಾನ: ಒಂದು ಬಾಣಲೆಗೆ ಕಡಲೆ ಹಿಟ್ಟು, ಅಕ್ಕಿ ಪುಡಿ , ಕಟ್ ಮಾಡಿದ ಈರುಳ್ಳಿ ಹಾಗೂ ಸದಕ್ಕೆ ನೀರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಉಪ್ಪು, ಜೀರಿಗೆ, ಕಾಯಿಮೆಣಸು, ಕೊತ್ತಂಬರಿ ಸೊಪ್ಪು ಹಾಕಿ ಸ್ವಲ್ಪ ಗಟ್ಟಿಯಾಗಿ ಕಲಸಿಟ್ಟುಕೊಳ್ಳಿ. ನಂತರ ಕಾದ ಎಣ್ಣೆಯಲ್ಲಿ ಮಿಶ್ರಣವನ್ನು ಹಾಕಿ ಕಂದು ಬಣ್ಣ ತಿರುಗುವವರೆಗೆ ಕಾಯಿಸಿ. ಇದೀಗ ರುಚಿಕರವಾದ ಈರುಳ್ಳಿ ಪಕೋಡ ಸವಿಯಲು ಸಿದ್ಧ.