ಇಂದಿನ ಸ್ಪೆಷಲ್ ರೆಸಿಪಿ ಚಿಕನ್ ಲಿವರ್ ಡ್ರೈ

ಇಂದಿನ ಸ್ಪೆಷಲ್ ರೆಸಿಪಿ ಚಿಕನ್ ಲಿವರ್ ಡ್ರೈ

YK   ¦    May 21, 2019 03:19:28 PM (IST)
ಇಂದಿನ ಸ್ಪೆಷಲ್ ರೆಸಿಪಿ ಚಿಕನ್ ಲಿವರ್ ಡ್ರೈ

ಕೋಳಿ ಮಾಂಸದಿಂದ ಬಗೆ ಬಗೆಯ ಪದಾರ್ಥಗಳನ್ನು ತಯಾರಿಬಹುದು. ಆದರೆ ಪ್ರತಿನಿತ್ಯ ಮಾಡಿದ್ದನ್ನೇ ತಿನ್ನಲು ಬೇಜಾರು. ತುಂಬಾ ಬೇಗನೇ ಸಿಂಪಲ್ ಆಗಿ ಮಾಂಸದ ಖಾದ್ಯ ಬಯಸುವವರು ಚಿಕನ್ ಲಿವರ್ ಸ್ಪೆಷಲ್ ನ್ನು ತಯಾರಿಸಬಹುದು. ಇದನ್ನು ಮಕ್ಕಳು ಕೂಡ ಇಷ್ಟ ಪಡುತ್ತಾರೆ.

ಬೇಕಾಗುವ ಸಾಮಾಗ್ರಿಗಳು:

ಚಿಕನ್ ಲಿವರ್- 1/2ಕೆಜಿ
ಈರುಳ್ಳಿ-ದೊಡ್ಡದು 1
ಕಾಯಿಮೆಣಸು-ಮೂರು
ಶುಂಠಿ- ಸ್ವಲ್ಪ
ಬೆಳ್ಳುಳ್ಳಿ - 2
ಕೊತ್ತಂಬರಿ- 1 ಚಮಚ
ಜೀರಿಗೆ-1 ಚಮಚ
ಕೆಂಪು ಮೆಣಸು- 3
ಎಣ್ಣೆ- 3 ಚಮಚ
ಕೊತ್ತಂಬರಿ ಸೊಪ್ಪು
ಉಪ್ಪು ರುಚಿಗೆ
ಕರಿಮೆಣಸು ಪೌಡರ್- 1/2ಚಮಚ

ಮಾಡುವ ವಿಧಾನ:
1.ಮೊದಲಿಗೆ ಒಂದು ಪಾತ್ರೆಯಲ್ಲಿ ಕೊತ್ತಂಬರಿ, ಜೀರಿಗೆ, ಕೆಂಪು ಮೆಣಸು ಹಾಕಿ ಸ್ವಲ್ಪ ಹುರಿಯಿರು. ನಂತರ ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿ ಇಟ್ಟುಕೊಳ್ಳಿ.

2. ಒಂದು ಬಾಣಲೆಗೆ ಎಣ್ಣೆ ಹಾಕಿ. ಕಟ್ ಮಾಡಿ ಇಟ್ಟುಕೊಂಡ ಬೆಳ್ಳುಳ್ಳಿ ಗೋಲ್ಡನ್ ಬಣ್ಣ ಬರುವವರೆಗೆ ಹುರಿದ ಬಳಿಕ ಈರುಳ್ಳಿ ಹಾಕಿ 5 ನಿಮಿಷ ಹುರಿಯಿರಿ. ನಂತರ ಕಟ್ ಮಾಡಿ ಇಟ್ಟುಕೊಂಡ ಕಾಯಿ ಮೆಣಸು, ಶುಂಠಿ ಹಾಕಿ. ಇದೀಗ ಚಿಕನ್ ಲಿವರ್ ಹಾಕಿ. ನಂತರ ಅದಕ್ಕೆ ಕರಿಮೆಣಸು ಪೌಡರ್, ಮಿಕ್ಸ್ ಮಾಡಿ ಇಟ್ಟುಕೊಂಡ ಪೌಡರ್ ಹಾಕಿ ಹಾಗೆಯೇ ಸ್ವಲ್ಪ ಹೊತ್ತು ಬೇಯಲು ಬಿಡಿ. ನಂತರ ಮಸಾಲೆ ಡ್ರೈ ಆಗುವವರೆಗೆ ಚೆನ್ನಾಗಿ ಹುರಿಯಿರಿ. ಇದೀಗ ಖಾರವಾದ, ರುಚಿಕರವಾದ ಚಿಕನ್ ಲಿವರ್ ಸ್ಪೆಷಲ್ ಸವಿಯಲು ಸಿದ್ದ.