ಮನೆಯಲ್ಲಿಯೇ ತಯಾರಿಸಿ ಆಲೂಚಾಟ್

ಮನೆಯಲ್ಲಿಯೇ ತಯಾರಿಸಿ ಆಲೂಚಾಟ್

LK   ¦    Feb 19, 2021 01:38:53 PM (IST)
ಮನೆಯಲ್ಲಿಯೇ ತಯಾರಿಸಿ ಆಲೂಚಾಟ್

ಮನೆಯಲ್ಲಿದ್ದುಕೊಂಡೇ ಸಂಜೆಯ ಕಾಫಿಗೆ ಏನಾದರೂ ಚಾಟ್ ಸೇವಿಸಬೇಕೆನ್ನುವವರು ಆಲೂ ಚಾಟ್ ಮಾಡಬಹುದಾಗಿದೆ. ಇದಕ್ಕೆ ಬೇಕಾಗುವ ಪದಾರ್ಥಗಳು ಮತ್ತು ಮಾಡುವ ವಿಧಾನ ಇಲ್ಲಿದೆ.

ಬೇಕಾಗುವ ಪದಾರ್ಥಗಳು

ಬೇಬಿ ಆಲೂಗಡ್ಡೆ- ಅರ್ಧ ಕೆಜಿ

ಮೊಸರು- ಒಂದು ಬಟ್ಟಲು

ಗರಂಮಸಾಲೆ- ಒಂದು ಚಮಚೆ

ಆಮೆಚೂರ್ ಪುಡಿ- ಒಂದು ಚಮಚೆ

ಅಚ್ಚಕಾರದ ಪುಡಿ- ಒಂದು ಚಮಚೆ

ಹಸಿಮೆಣಸಿನ ಕಾಯಿ- ಎರಡು

ಸಾಸಿವೆ- ಒಂದು ಚಮಚೆ

ಕರಿಬೇವು- ಸ್ವಲ್ಪ

ಕೊತ್ತಂಬರಿ ಸೊಪ್ಪು- ಸ್ವಲ್ಪ

ಎಣ್ಣೆ- ನಾಲ್ಕು ಚಮಚೆ

ಉಪ್ಪು- ರುಚಿಗೆ ತಕ್ಕಷ್ಟು

ಮಾಡುವುದು ಹೇಗೆ?

ಮೊದಲಿಗೆ ಆಲೂಗೆಡ್ಡೆಯನ್ನು ಬೇಯಿಸಿ ಸಿಪ್ಪೆ ತೆಗೆದುಕೊಳ್ಳಬೇಕು. ನಂತರ ಅದನ್ನು ಒಂದು ಬೌಲಿಗೆ ಹಾಕಬೇಕು. ಹಸಿಮೆಣಸನ್ನು ಹಚ್ಚಿ ಹಾಕಬೇಕು. ನಂತರ ಅಚ್ಚಕಾರದ ಪುಡಿ, ಗರಂಮಸಾಲೆ, ಅಮೆಚೂರ್ ಪುಡಿ, ಉಪ್ಪು ಹಾಕಿ ಎಲ್ಲವನ್ನು ಚೆನ್ನಾಗಿ ಬೆರೆಸಬೇಕು. ನಂತರ ಮೊಸರು ಕಲೆಸಿ  ಹತ್ತು ನಿಮಿಷ ಇಡಬೇಕು.

ಇದಾದ ನಂತರ ಒಂದು ಬಾಣಲೆಯನ್ನು ತೆಗೆದುಕೊಂಡು ನಿಧಾನ ಉರಿಯಲ್ಲಿ ಎಣ್ಣೆ ಹಾಕಿ ಅದು ಕಾದ ಬಳಿಕ ಸಾಸಿವೆ ಹಾಕಿ ಅದು ಸಿಡಿದ ನಂತರ ಕರಿಬೇವು ಸೊಪ್ಪು ಹಾಕಿ ಹುರಿಯಬೇಕು. ನಂತರ ಮಸಾಲೆ ಬೆರೆಸಿದ ಆಲೂಗಡ್ಡೆಯನ್ನು ಹಾಕಿ ಚೆನ್ನಾಗಿ ತಿರುಗಿಸಬೇಕು. ಆ ನಂತರ ಕೊತ್ತಂಬರಿ ಸೊಪ್ಪು ಉದುರಿಸಿ ಇಳಿಸಿದರೆ ಆಲೂಚಾಟ್ ಸಿದ್ಧವಾದಂತೆಯೇ...