ಸ್ಪೆಷಲ್ ಚಿಕನ್ ಲೆಗ್ ಪೀಸ್ ಫ್ರೈ

ಸ್ಪೆಷಲ್ ಚಿಕನ್ ಲೆಗ್ ಪೀಸ್ ಫ್ರೈ

LK   ¦    Aug 26, 2020 12:18:31 PM (IST)
ಸ್ಪೆಷಲ್ ಚಿಕನ್ ಲೆಗ್ ಪೀಸ್ ಫ್ರೈ

ಚಿಕನ್ ಲೆಗ್ ಪೀಸ್‍ನ್ನು ಪ್ರತ್ಯೇಕವಾಗಿ ತೆಗೆದುಕೊಂಡು ಅದನ್ನು ಫ್ರೈ ಮಾಡಿದರೆ ತುಂಬಾ ಚೆನ್ನಾಗಿರುತ್ತದೆ. ಇದನ್ನು ಮಾಡುವುದು ಕೂಡ ಅಷ್ಟೇನು ಕಷ್ಟವಲ್ಲ. ಹಾಗಾದರೆ ಚಿಕನ್ ಲೆಗ್ ಫ್ರೈ ಮಾಡುವುದು ಹೇಗೆ ಎಂಬುದರ ಕುರಿತ ಮಾಹಿತಿ ಇಲ್ಲಿದೆ.

ಬೇಕಾಗುವ ಪದಾರ್ಥಗಳ ವಿವರ

ಚಿಕನ್ ಲೆಗ್ ಪೀಸ್- ಆರು

ವಿನೆಗಾರ್- ಅರ್ಧ ಟೇಬಲ್ ಚಮಚ

ಕಾರದಪುಡಿ-ಅರ್ಧ ಟೇಬಲ್ ಚಮಚ

ಬೆಳ್ಳುಳ್ಳಿ, ಶುಂಠಿ ಪೇಸ್ಟ್- ಅರ್ಧ ಟೀ ಚಮಚ

ಉಪ್ಪು- ಒಂದು ಟೀ ಚಮಚ

ನೀರು- ಕಾಲು ಬಟ್ಟಲು

ಜೋಳದ ಹಿಟ್ಟು- ಒಂದು ಟೇಬಲ್ ಚಮಚ

ಮೈದಾ- ಅರ್ಧ ಬಟ್ಟಲು

ಉಪ್ಪು- ರುಚಿಗೆ ತಕ್ಕಷ್ಟು

ಎಣ್ಣೆ- ಹುರಿಯಲು ಬೇಕಾಗುವಷ್ಟು

ಮಾಡುವ ವಿಧಾನ ಈ ರೀತಿಯಿದೆ..

ಮೊದಲಿಗೆ ಚಿಕನ್ ಲೆಗ್ ಪೀಸ್‍ನ್ನು ತೆಗೆದುಕೊಂಡು ಅದನ್ನು ಕುಕ್ಕಿರಿನಲ್ಲಿ ಹಾಕಿ ಅದಕ್ಕೆ ವಿನೇಗರ್, ಕಾರದಪುಡಿ, ಬೆಳ್ಳುಳ್ಳಿ ಶುಂಠಿ ಪೇಸ್ಟ್, ಉಪ್ಪು ಹಾಕಿ. ಸ್ವಲ್ಪಹೊತ್ತು ಅಂದರೆ ನೀರು ಆವಿಯಾಗುವವರೆಗೆ ಬೇಯಿಸಿ ಸ್ವಲ್ಪ ಹೊತ್ತು ಬಿಡಿ.

ಇನ್ನೊಂದು ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ ಮೈದಾ ಹಿಟ್ಟು,  ಜೋಳದ ಹಿಟ್ಟು, ಚಿಟಿಕೆಯಷ್ಟು ಉಪ್ಪು, ಸ್ವಲ್ಪ ನೀರು ಹಾಕಿ ಎಲ್ಲವನ್ನು ಸೇರಿಸಿ ಚೆನ್ನಾಗಿ ಕಲೆಸಿಟ್ಟುಕೊಳ್ಳಬೇಕು. ಆ ನಂತರ ಬೇಯಿಸಿದ ಚಿಕನ್ ಲೆಗ್ ಪೀಸ್‍ನ್ನು ಮೈದಾಹಿಟ್ಟಿನ ಮಿಶ್ರಣಕ್ಕೆ ಅದ್ದಿ ತಾವಾದಲ್ಲಿ  ಎಣ್ಣೆ ಹಾಕಿ ನಿಧಾನ ಉರಿಯಲ್ಲಿ ಚೆನ್ನಾಗಿ ಎರಡು ಬದಿಯಲ್ಲಿ ಮಗುಚುತ್ತಾ ಕಂದು ಬಣ್ಣ ಬರುವ ತನಕ ಹುರಿದರೆ ಸ್ಪೆಷಲ್ ಲೆಗ್ ಪೀಸ್ ಫ್ರೈ ರೆಡಿಯಾದಂತೆಯೇ...