ರುಚಿ ಶುಚಿಯ ಸ್ಪೆಷಲ್ ಎಗ್ ಮಸಾಲ

ರುಚಿ ಶುಚಿಯ ಸ್ಪೆಷಲ್ ಎಗ್ ಮಸಾಲ

LK   ¦    Jan 02, 2020 02:29:53 PM (IST)
ರುಚಿ ಶುಚಿಯ ಸ್ಪೆಷಲ್ ಎಗ್ ಮಸಾಲ

ಮನೆಯಲ್ಲಿ ಮೊಟ್ಟೆಯಿದ್ದರಂತು ಏನಾದರೊಂದು ಖಾದ್ಯ ಮಾಡಿಬಿಡಬಹುದು. ಮೊಟ್ಟೆಯಲ್ಲಿ ಹತ್ತಾರು ರೀತಿಯ ರುಚಿಯಾದ ಪದಾರ್ಥಗಳನ್ನು ಮಾಡಬಹುದಾಗಿದ್ದು ಅದರಲ್ಲಿ ಎಗ್ ಮಸಾಲ ಕೂಡ ಒಂದಾಗಿದೆ. ಇದನ್ನು ಬ್ರೆಡ್ ನಡುವೆ ಹಾಕಿ ಬಿಸಿ ಮಾಡಿ ಸೇವಿಸಲು ರುಚಿಯಾಗಿರುತ್ತದೆ. ಹಾಗಾದರೆ ಎಗ್ ಮಸಾಲೆ ಮಾಡುವುದು ಹೇಗೆ? ಬೇಕಾಗುವ ಪದಾರ್ಥಗಳೇನು ಎಂಬುದರ ಮಾಹಿತಿ ಇಲ್ಲಿದೆ.

ಸ್ಪೆಷಲ್ ಎಗ್ ಮಸಾಲೆಗೆ ಬೇಕಾಗುವ ಪದಾರ್ಥಗಳು

ಮೊಟ್ಟೆ-ನಾಲ್ಕು

ಟೊಮ್ಯಾಟೋ ಪೂರಿ- ಅರ್ಧ ಬಟ್ಟಲು

ಕಾರಪುಡಿ- ಅರ್ಧ ಟೀ ಚಮಚ

ಜೀರಿಗೆಪುಡಿ- ಒಂದು ಟೀ ಚಮಚ

ಅರಸಿನಪುಡಿ- ಅರ್ಧ ಟೀ ಚಮಚ

ಉಪ್ಪು- ರುಚಿಗೆ ತಕ್ಕಷ್ಟು

ಎಣ್ಣೆ- ಮೂರು ಟೇಬಲ್ ಚಮಚ

ಗರಂಮಸಾಲೆ- ಒಂದು ಟೀ ಚಮಚ

ನೀರು- ಕಾಲು ಬಟ್ಟಲು

ತಯಾರಿಸುವ ವಿಧಾನ ಹೀಗಿದೆ...

ಮೊದಲಿಗೆ ಪಾತ್ರೆಯಲ್ಲಿ ಎಣ್ಣೆ ಹಾಕಬೇಕು ಅದು ಕಾಯುತ್ತಿದ್ದಂತೆಯೇ ಅದಕ್ಕೆ ಟೊಮ್ಯಾಟೋ ಸೇರಿಸಿ ಕಲಕಬೇಕು ಬಳಿಕ ಕಾರದ ಪುಡಿ, ಜೀರಿಗೆ ಪುಡಿ, ಅರಸಿನಪುಡಿ ಮತ್ತು ಉಪ್ಪು ಹಾಕಿ ಚೆನ್ನಾಗಿ ತಿರುಗಿಸಬೇಕು. ಆ ನಂತರ ಅದಕ್ಕೆ ನೀರು ಹಾಕಿ ಎರಡರಿಂದ ಮೂರು ನಿಮಿಷಗಳ ಕಾಲ ಕಲಕಿ ಬಳಿಕ ಮೊಟ್ಟೆಯನ್ನು ಒಡೆದು ಅದಕ್ಕೆ ಹಾಕಿ ಒಂದೆರಡು ನಿಮಿಷ ಬೇಯಲು ಬಿಡಬೇಕು. ಬೆಂದ ಬಳಿಕ ಅದರ ಮೇಲೆ ಗರಂ ಮಸಾಲೆ, ಅಗತ್ಯವಿದ್ದರೆ ಕರಿಮೆಣಸಿನ ಪುಡಿಯನ್ನು ಉದುರಿಸಿ ಇಳಿಸಿದರೆ ಸ್ಪೆಷಲ್ ಎಗ್ ಮಸಾಲ ರೆಡಿ.