ಕರಾವಳಿ ಸ್ಪೆಷಲ್ ‘ಭೂತಾಯಿ ಪುಲಿಮುಂಚಿ’

ಕರಾವಳಿ ಸ್ಪೆಷಲ್ ‘ಭೂತಾಯಿ ಪುಲಿಮುಂಚಿ’

YK   ¦    May 28, 2019 03:56:53 PM (IST)
ಕರಾವಳಿ ಸ್ಪೆಷಲ್ ‘ಭೂತಾಯಿ ಪುಲಿಮುಂಚಿ’

ಕರಾವಳಿಯ ಮೀನಿನ ಖಾದ್ಯಗಳಲ್ಲಿ ‘ಭೂತಾಯಿ ಪುಲಿಮುಂಚಿ’ ತುಂಬಾನೇ ಸಾಮಾನ್ಯವಾದದ್ದು. ಕೈಗೆಟಕುವ ಧರದಲ್ಲಿ ಸಿಗುವ ಭೂತಾಯಿ ಮೀನು ಆರೋಗ್ಯಕ್ಕೆ ಉತ್ತಮವಾಗಿದ್ದು, ತುಂಬಾನೇ ಕಡಿಮೆ ಸಮಯದಲ್ಲಿ ತಯಾರಿಸಬಹುದು. ಕರಾವಳಿ ಹೆಸರಾಂತ ಮೀನು ಹೊಟೇಲ್ ಗಳಲ್ಲಿ ಭೂತಾಯಿ ಪುಲಿಮುಂಚಿ ಸರ್ವೇ ಸಾಮಾನ್ಯವಾಘಿ ಸಿಗುತ್ತದೆ. ಈ ಖಾದ್ಯವನ್ನು ಬೇಗನೆ ತಯಾರಿಸುವುದು. 

ಬೇಕಾಗುವ ಸಾಮಾಗ್ರಿಗಳು

ಭೂತಾಯಿ ಮೀನು_10-15
ಮೆಣಸು- 13-15
ಕೊತ್ತಂಬರಿ ಬೀಜ- 2 ಚಮಚ
ಸಾಸಿವೆ- 1/2ಚಮಚ
ಜೀರಿಗೆ -1/2ಚಮಚ
ಮೆಂತ್ಯೆ-3ಕಾಳು
ಮೆಣಸಿನ ಕಾಯಿ: 1-2
ಹರಿಶಿನ, ಹುಳಿ, ಬೆಳ್ಳುಳ್ಳಿ, ಕಾಯಿ ಮೆಣಸು, ಶುಂಠಿ, ಈರುಳ್ಳಿ, ಉಪ್ಪು

ಮಾಡುವ ವಿಧಾನ:
1.ಮೊದಲು ಮೀನನ್ನು ಚೆನ್ನಾಗಿ ತೊಳೆಯಿರಿ.

2. ಒಂದು ಪಾತ್ರೆಯಲ್ಲಿ ಮೆಣಸು, ಕೊತ್ತಂಬರಿ, ಜೀರಿಗೆ, ಸಾಸಿವೆ, ಮೆಂತ್ಯೆ ಹಾಕಿ 2 ನಿಮಿಷ ಹುರಿಯಿರಿ. ನಂತರ ಈ ಎಲ್ಲ ಮಿಶ್ರಣದ ಜತೆ ಹುಳಿ, ಬೆಳ್ಳುಳ್ಳಿ, ಈರುಳ್ಳಿ ಜತೆಗೆ ಸ್ವಲ್ಪ ನೀರನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.

3. ಮಿಕ್ಸ್ ಮಾಡಿ ಇಟ್ಟುಕೊಂಡ ಮಸಾಲೆಗೆ ಸ್ವಲ್ಪ ನೀರು ಹಾಕಿ ಮೆಣಸಿನ ಕಾಯಿ, ಶುಂಠಿ ಹಾಗೂ ಈರುಳ್ಳಿಯನ್ನು ಸೇರಿಸಿ 15 ನಿಮಿಷಗಳ ಕಾಲ ಚಿಕ್ಕ ಉರಿಯಲ್ಲಿ ಬೇಯಿಸಿ. ನಂತರ ತೊಳೆದಿಟ್ಟಿರುವ ಮೀನನ್ನು ಸೇರಿಸಿ 10ರಿಂದ 12 ನಿಮಿಷ ಚಿಕ್ಕ ಉರಿಯಲ್ಲಿ ಬೇಯಿಸಿ. ಇದೀಗ ಭೂತಾಯಿ ಪುಲಿಮುಂಚಿ ಅನ್ನದ ಜತೆ ಸವಿಯಲು ಸಿದ್ಧ.