‘ಕೋಸ್ಟಲ್ ಫುಡ್ ಫೆಸ್ಟಿವಲ್’ : ಘಮಘಮಿಸಿದ ಕರಾವಳಿ ಭಕ್ಷ್ಯ ಭೋಜನ

‘ಕೋಸ್ಟಲ್ ಫುಡ್ ಫೆಸ್ಟಿವಲ್’ : ಘಮಘಮಿಸಿದ ಕರಾವಳಿ ಭಕ್ಷ್ಯ ಭೋಜನ

CI   ¦    Jul 14, 2019 11:45:35 AM (IST)
‘ಕೋಸ್ಟಲ್ ಫುಡ್ ಫೆಸ್ಟಿವಲ್’ : ಘಮಘಮಿಸಿದ ಕರಾವಳಿ ಭಕ್ಷ್ಯ ಭೋಜನ

ಮಡಿಕೇರಿ: ಕರಾವಳಿಯ ವಿಶೇಷ ಮೀನುಗಳ ಭಕ್ಷ್ಯ ಬೋಜನ... ದಕ್ಷಿಣ ಕನ್ನಡದ ಶಾಖಾಹಾರಿ ಪದಾರ್ಥಗಳಿಗೆ ಮನಸೋತ ಜನತೆ... ಮಂಗಳೂರು ಶೈಲಿಯ ಆಹಾರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಗ್ರಾಹಕರು... ಇಂತಹದೊಂದು ವಿಶಿಷ್ಟ ‘ಕೋಸ್ಟಲ್ ಫುಡ್ ಫೆಸ್ಟಿವಲ್’ ಸಿಲಿಕಾನ್ ಸಿಟಿ ಬೆಂಗಳೂರಿನ ಬೊಮ್ಮ ಸಂದ್ರದ ಸೌಥೆಂಡ್ ಹೋಟೆಲ್‍ನಲ್ಲಿ ನಡೆಯಿತು.

ಬೆಂಗಳೂರಿನ ಬೊಮ್ಮಸಂದ್ರದ ಹೊಸೂರು ಮುಖ್ಯ ರಸ್ತೆಯಲ್ಲಿರುವ ಸೌಥೆಂಡ್ ಟಿ.ಜಿ.ಐ ಬೋಟಿಕ್ ಹೊಟೇಲ್‍ನ ಅರ್ಬನ್ ಉಡುಪಿ ರೆಸ್ಟೋರೆಂಟ್‍ನಲ್ಲಿ ‘ಕೋಸ್ಟಲ್ ಫುಡ್ ಫಿಯಸ್ಟಾ’ ಎಂಬ ಆಹಾರ ಮೇಳ ಸಿಲಿಕಾನ್ ಸಿಟಿ ಬೆಂಗಳೂರಿನ ಜನತೆಯನ್ನು ತನ್ನತ್ತ ಆಕರ್ಷಿಸಿತು.

ಆಹಾರ ಮೇಳದಲ್ಲಿ ವಿವಿಧ ಬಗೆಯ ಮೀನುಗಳ ಫ್ರೈ, ಮಂಗಳೂರು ಶೈಲಿಯ ನಾನಾ ಬಗೆಯ ಸ್ವಾದಿಷ್ಟಕರ ಮೀನಿನ, ಏಡಿಗಳ ಖಾದ್ಯ ಹಾಗೂ ಕರಾವಳಿಯ ಇತರ ಆಹಾರ ಪದಾರ್ಥಗಳು ಗಮ್ಮೆಂದವು. ಒಂದೆಡೆ ಆಹಾರ ಮೇಳದಲ್ಲಿ ಕರಾವಳಿ ಆಹಾರದ ರುಚಿ ಸವಿಯುತ್ತಿದ್ದ ಗ್ರಾಹಕರಿಗೆ ಬೆಂಗಳೂರು ಕಲಾವಿದರ ಸುಮಧುರ ಸಂಗೀತ ವಿಶೇಷ ರಸದೌತಣ ನೀಡಿತು.
ಜು. 21ರ ವರೆಗೆ ನಡೆಯಲಿರುವ ಆಹಾರ ಮೇಳವನ್ನು ಮೂಲತಃ ಕೊಡಗಿನ ಮರಗೋಡಿನ ನಿವಾಸಿ ಬೆಂಗಳೂರಿನಲ್ಲಿ ನೆಲೆಸಿರುವ ಬಿಜೆಪಿ ಮುಖಂಡ ಚೆರಿಯಮನೆ ರತ್ನಕುಮಾರ್ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಬೊಮ್ಮಸಂದ್ರದ ಪುರಸಭಾ ಕಮಿಷನರ್ ರಮೇಶ್, ಹೆಬ್ಗೋಡಿ ನಗರಸಭಾ ಕಮಿಷನರ್ ನರಸಿಂಹ ಮೂರ್ತಿ, ಉಪಾಧ್ಯಕ್ಷ ರಾಜೇಂದ್ರ, ಸದಸ್ಯ ರಕೇಶ್, ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯ ಜಂಟಿ ನಿರ್ದೇಕ ಪ್ರಭಾಕರ್, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಪ್ರದಾನ ವ್ಯವಸ್ಥಾಪಕರಾದ ಜಿ.ವಿ. ಚಂದ್ರಕುಮಾರ್, ಡಿ.ವೈ.ಎಸ್.ಪಿ. ನಂಜುಂಡಗೌಡ, ಎಂ.ಆರ್.ಎಫ್ ಟಯರ್ಸ್‍ನ ಕಿರಣ್ ಕುಮಾರ್, ಬೆಂಗಳೂರು ಕೆಂಪೇಗೌಡ ಒಕ್ಕಲಿಗರ ಸಂಘದ ಪದಾಧಿಕಾರಿಗಳಾದ ಶೈಲೇಶ್, ಸೂರಿ, ಕಾಂತರಾಜು, ನಾಗರಾಜು, ರಾಜು, ಬೆಂಗಳೂರು ಇಸ್ರೋ ಕೇಂದ್ರದ ರವಿಗೌಡ, ಬಿಜೆಪಿ ಮುಖಂಡ ಪುರುಷೋತ್ತಮ ಮತ್ತಿತರರು ಉಪಸ್ಥಿತರಿದ್ದರು.
ಕೋಸ್ಟಲ್ ಫುಡ್ ಫಿಯಿಸ್ಟಾದಲ್ಲಿ ಕೃತಕ ಮರದ ದೋಣಿಯನ್ನು ತಯಾರಿಸಿ ಅದರ ಮೇಲೆ ವಿವಿಧ ಬಗೆಯ ಕರಾವಳಿಯ ಖಾದ್ಯಗಳನ್ನು ಅಲಂಕರಿಸ್ಪಟ್ಟಿದ್ದು, ಮೇಳದ ವಿಶೇಷವಾಗಿತ್ತು.

ಸೌಥೆಂಡ್ ಹೋಟೆಲ್‍ನ ನಿರ್ದೇಶಕರುಗಳಾದ ಪದ್ಮನಾಭ ಪಾಯಡ್, ಪ್ರದಾ ಶೆಟ್ಟಿ, ಚೆರಿಯಮನೆ ರತ್ನಕುಮಾರ್, ಹೋಟೆಲ್‍ನ ವ್ಯವಸ್ಥಪಕರಾದ ಅರುಣ್ ಪ್ರಸಾದ್, ಸುಂಟಿಕೊಪ್ಪ ಕೀರ್ತನ್ ಇವರುಗಳ ಮಾರ್ಗದರ್ಶನದಲ್ಲಿ ನಡೆದ ಆಹಾರ ಉತ್ಸವ ಯಶಸ್ವಿಯೊಂದಿಗೆ ಜನಪ್ರಿಯತೆ ಪಡೆದುಕೊಂಡಿತು. ಈ ಕೋಸ್ಟಲ್ ಫುಡ್ ಫೆಸ್ಟಿವಲ್ ಜು. 21ರ ವರೆಗೆ ನಡೆಯಲಿದ್ದು, ಭಾಗವಹಿಸುವವರು ಮೊ.ಸಂ. 7094492803 ನ್ನು ಸಂಪರ್ಕಿಸಬಹುದಾಗಿದೆ.