ಕುಂಬಳಕಾಯಿಯ ವಿವಿಧ ಖಾದ್ಯಗಳು

ಕುಂಬಳಕಾಯಿಯ ವಿವಿಧ ಖಾದ್ಯಗಳು

Megha R Sanadi   ¦    Sep 28, 2020 05:29:59 PM (IST)
ಕುಂಬಳಕಾಯಿಯ ವಿವಿಧ ಖಾದ್ಯಗಳು

ಆರೋಗ್ಯಗಕ್ಕೆ ಹಲವು ಪ್ರಯೋಜನಗಳನ್ನು ನೀಡುವ ಕುಂಬಳಕಾಯಿಯಿಂದ ಹಲವು ರೀತಿಯ ಖಾದ್ಯಗಳನ್ನು ತಯಾರಿಸಬಹುದು.

ಕುಂಬಳಕಾಯಿ ಎಣ್ಣೆ ರೊಟ್ಟಿ

ಬೇಕಾಗುವ ಸಾಮಾಗ್ರಿ: ಕುಂಬಳಕಾಯಿ ತುರಿ 1ಕಪ್, ಅಕ್ಕಿಹಿಟ್ಟು 1ಕಪ್, ಶುಂಠಿ 1 ಪೀಸ್, ಕರಿಬೇವು 2 ಎಸಳು, ಹಸಿಮೆಣಸು 3, ಎಣ್ಣೆ 1/4 ಕಪ್, ಈರುಳ್ಳಿ 1(ದೊಡ್ಡದು), ಉಪ್ಪು ಹಾಗು ಬೆಲ್ಲ ರುಚಿಗೆ ತಕ್ಕಷ್ಟು.

ಮಾಡುವ ವಿಧಾನ:  ಬಾಣಲೆಯಲ್ಲಿ ಕುಂಬಳಕಾಯಿ ತುರಿ, ಬೆಲ್ಲ, ಉಪ್ಪು ಸೇರಿಸಿ 5ನಿಮಿಷ ಬೇಯಿಸಿ ಅದಕ್ಕೆ ಶುಂಠಿ, ಕರಿಬೇವಿನ ಸೊಪ್ಪು, ಹೆಚ್ಚಿದ ಈರುಳ್ಳಿ ಮತ್ತು ಹಸಿಮೆಣಸು, ಅಕ್ಕಿ ಹಿಟ್ಟು ಹಾಕಿ ಕದಡಿ 5 ನಿಮಿಷ ಆರಲು ಬಿಟ್ಟು ನಂತರ ರೊಟ್ಟಿ ತಟ್ಟುವಂತ್ತೆ ತಟ್ಟಿ ಕಾವಲಿಯ ಮೇಲೆ ಸ್ವಲ್ಪ ಎಣ್ಣೆಯೊಂದಿಗೆ 2 ಬದಿಯು ಬೇಯಿಸಿ. ನಂತರ ಬೆಣ್ಣೆಯಂದಿಗೆ ಸವಿಯಿರಿ.

ಕುಂಬಳಕಾಯಿ ಹಸಿ:

ಬೇಕಾಗುವ ಸಾಮಾಗ್ರಿ: ತುರಿದ ಕುಂಬಳಕಾಯಿ 1/2 ಕಪ್, ಮೊಸರು 2 ಚಮಚ, ಸಾಸಿವೆ 1 ಚಮಚ, ಹಸಿಮೆಣಸು 2, ಎಣ್ಣೆ 1 ಚಮಚ, ಕಾಯಿ ತುರಿ ಸ್ವಲ್ಪ, ಉಪ್ಪು ಮತು ರುಚಿಗೆ ತಕ್ಕಸ್ಟು.

ಮಾಡುವ ವಿಧಾನ: ಒಂದು ಬಟ್ಟಲಿಗೆ ತುರಿದ ಕುಂಬಳಕಾಯಿ, ಮೋಸರು, ಉಪ್ಪು ಹಾಗು ಸಕ್ಕರೆ ಹಾಕಬೇಕು. ನಂತರ ಕಾಯಿತುರಿ, ಸಾಸಿವೆ, ಹಸಿ ಮೆಣಸನ್ನು ರುಬ್ಬಿ ಅದಕ್ಕೆ ಹಾಕಿ. ಒಗ್ಗರಣೆ ಕೊಟ್ಟರೆ ಕುಂಬಳಕಾಯಿ ಹಸಿ ಅನ್ನದೊಂದಿಗೆ ಸವಿಯಲು ಸಿದ್ದ.

ಕುಂಬಳಕಾಯಿ ದೊಂರೋಟ್ (ಹಲ್ವ):

ಬೇಕಾಗುವ ಸಾಮಾಗ್ರಿ: ಕುಂಬಳಕಾಯಿ ತುರಿ 2 ಕಪ್, ತುಪ್ಪ 1/4 ಕಪ್, ಗೋಡಂಬಿ ಹಾಗು ದ್ರಾಕ್ಷಿ ಬಾಕಾದಷ್ಟು, ಸಕ್ಕರೆ 1 ಕಪ್, ಉಪ್ಪು ಮತ್ತು ಎಲಕ್ಕಿ ಪುಡಿ 2ಚಿಟಿಕಿ.

ಮಾಡುವ ವಿಧಾನ: ಕುಂಬಳಕಾಯಿ ತುರಿಯನ್ನು ಹಿಂಡಿ ರಸ ತೆಗೆದು ಬಾಣಲೆಯಲ್ಲಿ ಹಾಕಿ 10 ನಿಮಿಷ ಬೇಯಿಸಿ. ನೀರು ಆರಿದ ನಂತರ ಸಕ್ಕರೆ ,ಏಲಕ್ಕಿ ಪುಡಿ ಮತ್ತು ಉಪ್ಪು ಹಾಕಿ ಹಲ್ವದ ಹದಕ್ಕೆ ಬರುವ ತನಕ ಕದಡುತ್ತಿರಬೇಕು. ಇನ್ನೊಂದು ಬಾಣಲಿಯಲ್ಲಿ ತುಪ್ಪ ಕಯಿಸಿಕೊಂಡು ಗೋಡಂಬಿ, ದ್ರಾಕ್ಷಿ ಹಕಿ ಹುರಿದು ಹಲ್ವದ ಜೊತೆಗೆ ಸೇರಿಸಿದರೆ ಕುಂಬಳಕಾಯಿ ದೊಂರೋಟ್ ಸವಿಯಲು ಸಿದ್ದ.

ಕುಂಬಳಕಯಿ ಪಾನಕ ಬೇಕಾಗುವ ಸಾಮಾಗ್ರಿ: ಕುಂಬಳಕಾಯಿ ತುರಿ ಹಿಂಡಿತೆಗೆದ ನೀರು 1 ಲೋಟ, ಬೆಲ್ಲ ರುಚಿಗೆ ತಕ್ಕಷ್ಟು, ಉಪ್ಪು ಮತ್ತು ಏಲಕ್ಕಿ ಪುಡಿ 1 ಚಿತಕಿ.

ಮಾಡುವ ವಿಧಾನ:  ಕುಂಬಳಕಾಯಿ ತುರಿ ಹಿಂಡಿತೆಗೆದ ನೀರಿಗೆ ಬೆಲ್ಲ, ಉಪ್ಪು ಹಾಗು ಎಲಕ್ಕಿ ಪುಡಿ ಸೇರಿಸಿ ಕದಡಿದರೆ ಆರೋಗ್ಯಕರ ತಂಪು ಪಾನಿಯ ಕುಡಿಯಲು ಸಿದ್ದ.