ಸಿಂಪಲ್ ಫಿಶ್ ಫಿಂಗರ್ಸ್ ಮಾಡಿ ನೋಡಿ!

ಸಿಂಪಲ್ ಫಿಶ್ ಫಿಂಗರ್ಸ್ ಮಾಡಿ ನೋಡಿ!

LK   ¦    Mar 30, 2021 12:48:07 PM (IST)
ಸಿಂಪಲ್ ಫಿಶ್ ಫಿಂಗರ್ಸ್ ಮಾಡಿ ನೋಡಿ!

ಮೀನಿನಿಂದ ಹಲವು ರೀತಿಯ ಪದಾರ್ಥಗಳನ್ನು ತಯಾರಿಸಬಹುದಾಗಿದ್ದು, ಅದರಲ್ಲಿ ಫಿಶ್ ಫಿಂಗರ್ಸ್ ಕೂಡ ಒಂದಾಗಿದೆ. ಇದನ್ನು ತಯಾರಿ ಮಾಡುವುದು ಅಷ್ಟೇನು ಕಷ್ಟವಲ್ಲ. ಹಾಗಾದರೆ ಇದಕ್ಕೆ ಬೇಕಾಗುವ ಮಸಾಲೆ ಮತ್ತು ತಯಾರು ಮಾಡುವುದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು

ಮೀನು: ಅರ್ಧ ಕೆಜಿ

ಬೆಳ್ಳುಳ್ಳಿ ಶುಂಠಿ ಪೇಸ್ಟ್: ಒಂದು ಟೀ ಚಮಚೆ

ಅರಸಿನ ಪುಡಿ: ಕಾಲು ಟೀ ಚಮಚೆ

ಜೀರಿಗೆ ಪುಡಿ: ಒಂದು ಟೀ ಚಮಚೆ

ಮೆಣಸಿನಪುಡಿ: ಎರಡು ಟೀ ಚಮಚೆ

ಉಪ್ಪು: ರುಚಿಗೆ ತಕ್ಕಷ್ಟು

ವಿನೆಗಾರ್: ಒಂದು ಟೇಬಲ್ ಚಮಚೆ

ಮೊಟ್ಟೆ: ಎರಡು

ಬ್ರೆಡ್ ಚೂರು: ಒಂದು ಬಟ್ಟಲು

ಎಣ್ಣೆ: ಕರಿಯಲು ಅಗತ್ಯವಿರುವಷ್ಟು

ತಯಾರು ಮಾಡುವ ವಿಧಾನ

ಮೊದಲಿಗೆ ಮುಳ್ಳಿಲ್ಲದ ಮಾಂಸ ಖಂಡಗಳನ್ನು ಹೊಂದಿದ ಮೀನನ್ನು ತೆಗೆದುಕೊಂಡು ಅದನ್ನು ಬೆರಳಿನ ಗಾತ್ರಕ್ಕೆ ತುಂಡುಗಳಾಗಿ ಮಾಡಿಕೊಳ್ಳಬೇಕು. ಒಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಬೆಳ್ಳುಳ್ಳಿ ಶುಂಠಿ ಪೇಸ್ಟ್, ಅರಸಿನ, ಜೀರಿಗೆ, ಮೆಣಸಿನ ಪುಡಿ, ಉಪ್ಪು, ವಿನೆಗಾರ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ಇದಕ್ಕೆ ಮೀನನ್ನು ಹಾಕಿ ಚೆನ್ನಾಗಿ ಕಲೆಸಬೇಕು. ಹೀಗೆ ಕಲೆಸಿದ ಮೀನನ್ನು ಸುಮಾರು ಅರ್ಧ ಗಂಟೆಗಳಿಗೂ ಹೆಚ್ಚು ಕಾಲ ಇಡಬೇಕು.

ಮೀನಿಗೆ ಮಸಾಲೆ ಹಿಡಿದ ನಂತರ ಒಂದು ಪಾತ್ರೆಯಲ್ಲಿ ಹಸಿ ಮೊಟ್ಟೆಯನ್ನು ಹಾಕಿ ಅದನ್ನು ಚಮಚೆಯಿಂದ ಚೆನ್ನಾಗಿ ತಿರುಗಿಸಬೇಕು. ಆ ನಂತರ ಅದಕ್ಕೆ ಮೊದಲೇ ಮಸಾಲೆ ಮಿಶ್ರ ಮಾಡಿಟ್ಟ ಮೀನನ್ನು ಅದ್ದಿ ತೆಗೆದು ಬ್ರೆಡ್ ಚೂರಿನಲ್ಲಿ ಉರುಳಿಸಿ ಎಣ್ಣೆಯಲ್ಲಿ ಕರಿದು ತೆಗೆದರೆ ಸಿಂಪಲ್ ಫಿಶ್ ಫಿಂಗರ್ಸ್ ರೆಡಿಯಾದಂತೆಯೇ...!