ಮಿಕ್ಸ್ ‘ಮಸಾಲ’ ದೋಸೆ ಸವಿದು ನೋಡಿ!

ಮಿಕ್ಸ್ ‘ಮಸಾಲ’ ದೋಸೆ ಸವಿದು ನೋಡಿ!

LK   ¦    Dec 14, 2018 02:14:19 PM (IST)
ಮಿಕ್ಸ್ ‘ಮಸಾಲ’ ದೋಸೆ ಸವಿದು ನೋಡಿ!

ದೋಸೆಗಳನ್ನು ನಾನಾ ರೀತಿಯಲ್ಲಿ ತಯಾರಿಸಬಹುದಾಗಿದೆ. ಹೀಗೆ ತಯಾರಿಸಿದ ದೋಸೆಗಳು ಅದರದ್ದೇ ಆದ ರುಚಿಯನ್ನು ನೀಡುವುದು ಸಾಮಾನ್ಯವಾಗಿರುತ್ತದೆ. ಇಲ್ಲಿ ಪರಿಚಯಿಸುತ್ತಿರುವುದು ಮಾಮೂಲಿ ಮಸಾಲೆ ದೋಸೆ ಅಲ್ಲ. ಮಸಾಲೆಗಳನ್ನು ಹಾಕಿ ಮಾಡಿದ ಸ್ಪೆಷಲ್ ಮಿಕ್ಸ್ ಮಸಾಲ ದೋಸೆ.

ಇದನ್ನು ತಯಾರಿಸಲು ಬೇಕಾಗುವ ಪದಾರ್ಥಗಳು ಹೀಗಿವೆ.

ಅಕ್ಕಿ- ಒಂದು ಕಪ್

ಮೆಂತೆ- ಎರಡು ಚಮಚ

ಉದ್ದಿನಬೇಳೆ- ಕಾಲು ಕಪ್

ಕಡ್ಲೆಬೇಳೆ- ಅರ್ಧಕಪ್

ಈರುಳ್ಳಿ- ಒಂದು

ಶುಂಠಿ- ಸ್ವಲ್ಪ

ಹಸಿಮೆಣಸಿನಕಾಯಿ-4

ಕೊತ್ತಂಬರಿ ಸೊಪ್ಪು- ಸ್ವಲ್ಪ

ಉಪ್ಪು- ರುಚಿಗೆ ತಕ್ಕಂತೆ

ಕರಿಬೇವು- ಸ್ವಲ್ಪ

ಮಾಡುವ ವಿಧಾನ ಹೀಗಿದೆ..

ಹಿಂದಿನ ರಾತ್ರಿಯೇ ಅಕ್ಕಿ, ಕಡ್ಲೆಬೇಳೆ, ಉದ್ದು, ಮೆಂತೆಯನ್ನು ನೆನೆಯಲು ಹಾಕಿಡಿ. ಬೆಳಗ್ಗೆ ಅದನ್ನು ತೆಗೆದುಕೊಂಡು ಮಿಕ್ಸಿ ಮಾಡಿಕೊಳ್ಳಿ. ಇನ್ನೊಂದೆಡೆ ಕರಿಬೇವು, ಶುಂಠಿ, ಮೆಣಸಿನ ಕಾಯಿ, ಈರುಳ್ಳಿ, ಕೊತ್ತಂಬರಿ ಸೊಪ್ಪು, ಉಪ್ಪು ಹಾಕಿ ಮಿಕ್ಸಿ ಮಾಡಿ ನಂತರ ಅದನ್ನು ಮೊದಲು ಮಾಡಿಟ್ಟ ಹಿಟ್ಟಿನ ಸೇರಿಸಿ ಮಿಕ್ಸ್ ಮಾಡಿ ಅಳತೆ ನೋಡಿಕೊಂಡು ಅಗತ್ಯವಿದ್ದರೆ ನೀರು ಸೇರಿಸಿ ಹೆಚ್ಚು ತೆಳ್ಳಗೆ ಮಾಡದೆ ಮಂದವಾಗಿಯೇ ಇರಲಿ. ಬಳಿಕ ಎಣ್ಣೆ ಸವರಿ ದೋಸೆಕಲ್ಲಿನಲ್ಲಿ ಹೊಯ್ಯಿರಿ. ಅಲ್ಲಿಗೆ ದೋಸೆ ಆದಂತೆಯೇ ಅದನ್ನು ಬಿಸಿಯಿರುವಾಗಲೇ ಚಟ್ನಿಯೊಂದಿಗೆ ಸೇವಿಸಿ.