ಹೊತ್ತಿ ಉರಿದ ಬಿಎಂಟಿಸಿ ಬಸ್

ಹೊತ್ತಿ ಉರಿದ ಬಿಎಂಟಿಸಿ ಬಸ್

Dec 03, 2016 03:13:08 PM (IST)

ಬೆಂಗಳೂರು: ಬೆಂಗಳೂರು-ಮೈಸೂರು ರಸ್ತೆಯ ಚನ್ನಪಟ್ಟಣ ಬಳಿ ಬಿಎಂಟಿಸಿ ಬಸ್ ಹೊತ್ತಿ ಉರಿದಿದ್ದು, ಬಸ್ ನಲ್ಲಿದ್ದ ಮಕ್ಕಳನ್ನು ತಕ್ಷಣ ಕೆಳಗಿಳಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಶಾಲೆಯೊಂದು ಬಿಎಂಟಿಸಿ ಬಸ್  ಬುಕ್ ಮಾಡಿ ಪ್ರವಾಸಕ್ಕೆ ತೆರಳುತ್ತಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ. ಚನ್ನಪಟ್ಟಣದ ಕಡೆ ಹೊರಡುತ್ತಿದ್ದ ಬಿಎಂಟಿಸಿ ಬಸ್ಕಾಮತ್ ಹೋಟೆಲ್ ಬಳಿ ನಿಲ್ಲಿಸಿತ್ತು. ವಿದ್ಯಾಥರ್ಿಗಳೆಲ್ಲ ಊಟಕ್ಕೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಇದನ್ನು ಕಂಡು ಚಾಲಕ ಬಸ್ನಲ್ಲಿದ್ದ ಇನ್ನು ಕೆಲವು ವಿದ್ಯಾಥರ್ಿಗಳನ್ನು ಇಳಿಸಿದ್ದರಿಂದ ಹೆಚ್ಚಿನ ಪ್ರಾಣಾಪಾಯವಾಗಿಲ್ಲ. ಬಸ್ ನಲ್ಲಿ ಶಾರ್ಟ್ ಸರರ್ಕ್ಯೂಟ್ ನಿಂದಲೇ ಬೆಂಕಿ ಹತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಬಸ್ ನಿಂದ ಇಳಿಯುವಾಗ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.