ದಾವೋಸ್ ಪ್ರಯಾಣ ಯಶಸ್ವಿಯಾಗಿದೆ: ಯಡಿಯೂರಪ್ಪ

ದಾವೋಸ್ ಪ್ರಯಾಣ ಯಶಸ್ವಿಯಾಗಿದೆ: ಯಡಿಯೂರಪ್ಪ

HSA   ¦    Jan 25, 2020 07:11:17 PM (IST)
ದಾವೋಸ್ ಪ್ರಯಾಣ ಯಶಸ್ವಿಯಾಗಿದೆ: ಯಡಿಯೂರಪ್ಪ

ಬೆಂಗಳೂರು: ರಾಜ್ಯಕ್ಕೆ ಸಾವಿರಾರು ಕೋಟಿ ರೂಪಾಯಿ ಬಂಡವಾಳ ಹರಿದು ಬರಲಿದೆ ಎಂದು ದಾವೋಸ್ ವಿಶ್ವ ಆರ್ಥಿಕ ವೇದಿಕೆಯಿಂದ ಮರಳಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು.

ಶನಿವಾರ ಅವರು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ಜಗತ್ತಿನ ದೊಡ್ಡ ಉದ್ಯಮಿಗಳನ್ನು ನಾವನು ದಾವೋಸ್ ನಲ್ಲಿ ಭೇಟಿ ಮಾಡಿದ್ದೇನೆ. ಅವರು ರಾಜ್ಯದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿಸಿರುವರು. ನವೆಂಬರ್ ನಲ್ಲಿ ನಡೆಯುವ ವಿಶ್ವ ಹೂಡಿಕೆದಾರರ ಸಮ್ಮೇಳನದಲ್ಲಿ ಎಷ್ಟು ಬಂಡವಾಳ ಬರಲಿದೆ ಎನ್ನುವ ಮಾಹಿತಿ ಸಿಗಲಿದೆ ಎಂದರು.

ದಾವೋಸ್ ಪ್ರಯಾಣ ಯಶಸ್ವಿಯಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಯುವಕರು ಹಾಗೂ ರೈತರಿಗೆ ಲಾಭವಾಗುವ ವಾತಾವರಣ ನಿರ್ಮಾಣ ಮಾಡಬಹುದು ಎಂದು ಹೇಳಿದರು.