ಸಕಲ ಸರ್ಕಾರಿ ಗೌರವಗಳೊಂದಿಗೆ ಡಾ.ಎಂ ಚಿದಾನಂದ ಮೂರ್ತಿ ಅಂತ್ಯಕ್ರಿಯೆ

ಸಕಲ ಸರ್ಕಾರಿ ಗೌರವಗಳೊಂದಿಗೆ ಡಾ.ಎಂ ಚಿದಾನಂದ ಮೂರ್ತಿ ಅಂತ್ಯಕ್ರಿಯೆ

YK   ¦    Jan 12, 2020 12:50:38 PM (IST)
ಸಕಲ ಸರ್ಕಾರಿ ಗೌರವಗಳೊಂದಿಗೆ ಡಾ.ಎಂ ಚಿದಾನಂದ ಮೂರ್ತಿ ಅಂತ್ಯಕ್ರಿಯೆ

ಬೆಂಗಳೂರು: ಶನಿವಾರ ನಿಧನರಾಗಿರುವ ಹಿರಿಯ ಸಾಹಿತಿ, ಡಾ.ಎಂ.ಚಿದಾನಂದ ಮೂರ್ತಿ (88) ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನಗರದ ಸುಮನಳ್ಳಿ ವಿದ್ಯುತ್ ಚಿತಾಗಾರದಲ್ಲಿ ಭಾನುವಾರ ನೆರವೇರಿತು.

ಅಂತ್ಯಕ್ರಿಯೆ ವೇಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಅನೇಕ ಗಣ್ಯರು, ಚಿದಾನಂದಮೂರ್ತಿಯವರ ಬಂಧುಗಳು, ಅಪಾರ ಅಭಿಮಾನಿಗಳು ಹಾಜರಿದ್ದರು. ಅಂತ್ಯಕ್ರಿಯೆ ವೇಳೆ ‘ಅಮರರಾಗಲಿ ಚಿದಾನಂದಮೂರ್ತಿ’, ‘ಸಿರಿಗನ್ನಡಂ ಗೆಲ್ಗೆ’ ಎಂಬ ಘೋಷಣೆಗಳು ಕೇಳಿಬಂದವು.